ವಿಜಯಪುರ: 22 ವರ್ಷದ ಯುವತಿ ಮೇಲೆ ಅತ್ಯಾಚಾರಗೈದಿರುವ ಘಟನೆ ವಿಜಯಪುರ ನಗರದ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯ ನಿರ್ಜನ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿ
ಯುವತಿಯನನ್ನು ಪುಸಲಾಯಿಸಿ ಮೂವರು ಕರೆದುಕೊಂಡು ಹೋಗಿದ್ದಾರೆ. ತದನಂತರ ಮೂವರಲ್ಲಿ ಓರ್ವ ಯುವತಿಯ ಮೇಲೆ ಅತ್ಯಾಚಾರಗೈದಿದ್ದಾನೆ. ಅಲ್ಲದೇ, ಇನ್ನಿಬ್ಬರು ಅತ್ಯಾಚಾರಕ್ಕೆ ಸಾತ್ ನೀಡಿದ್ದಾರೆ ಎಂದು ಕೇಸ್ನಲ್ಲಿ ಉಲ್ಲೇಖಿಸಲಾಗಿದೆ. ಯುವತಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ, ಮೂವರ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ. ವಿಜಯಪುರ ಮಹಿಳಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಮ್ಮಟನಗರಿಯಲ್ಲಿ ಯುವತಿ ಮೇಲೆ ಅತ್ಯಾಚಾರ.. ಇಬ್ಬರು ಸಾತ್.. ಆ ಮೂವರು ಯಾರು..?
![](https://karnataka1news.com/wp-content/uploads/2023/01/FB_IMG_1606454321642.jpg)