ಮಧ್ಯಪ್ರದೇಶ: ದೇಶ, ರಾಜ್ಯಾದ್ಯಂತ ಟೊಮೆಟೊ ಬೆಲೆ ಗಗನಕ್ಕೆ ಏರಿಕೆ ಆಗಿದೆ. ಇನ್ನೂ ಟೊಮೆಟೊಗೆ ಚಿನ್ನದ ಬೆಲೆ ಬಂದಿದೆ. ಎರಡು ಟೊಮೆಟೊ ಒಂದು ಕುಟುಂಬವನ್ನೇ ದೂರ ಮಾಡಿರುವ ಆಶ್ಚರ್ಯಕರ ಘಟನೆ ನಡೆದಿದೆ. ಪತ್ನಿಯನ್ನು ಕೇಳದೆ ಪತಿಯೊಬ್ಬ ಅಡುಗೆ ಮನೆಯಲ್ಲಿ ಟೊಮೆಟೊ ಬಳಸಿದ್ದಾನೆ. ಅದಕ್ಕಾಗಿ ಪತ್ನಿ ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ಹೌದು.. ಇಂತಹ ಘಟನೆಯೊಂದು ಮಧ್ಯಪ್ರದೇಶದ ಶಹದೋಲ್ನಲ್ಲಿ ನಡೆದಿದೆ. ಸಂಜೀವ್ ಬರ್ಮನ್ ಟಿಫಿನ್ ಸರ್ವಿಸ್ ನಡೆಸುತ್ತಿದ್ದಾರೆ. ಆದ್ರೇ, ಅಡುಗೆ ಮಾಡುವಾಗ ಪತ್ನಿಯ ಅನುಮತಿ ಇಲ್ಲದೆ 2 ಟೊಮೆಟೋವನ್ನು ಅಡುಗೆಯಲ್ಲಿ ಬಳಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೋಪಗೊಂಡ ಪತ್ನಿ, ಜಗಳವಾಡಿ ಮಗಳನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ. ಸಂಜೀವ್ ಹತ್ತಿರದ ಪೊಲೀಸ್ ಠಾಣೆಯಲ್ಲಿ ಹೆಂಡತಿ ಮನೆ ಬಿಟ್ಟು ಹೋಗಿರುವ ಬಗ್ಗೆ ದೂರು ನೀಡಿದ್ದಾರೆ.