ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿ ಓರ್ವ ಮಹಿಳೆ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಲಿಬೆಂಚಿ ಕ್ರಾಸ್ ಬಳಿ ನಡೆದಿದೆ.
![](https://karnataka1news.com/rugleeps/2022/07/IMG-20220707-WA0073.jpg)
GA 11 – A 3738 ನಂಬರಿನ ಕಾರ್ ಪಲ್ಟಿಯಾಗಿದೆ. ಇನ್ನು ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತಪಟ್ಟಿರುವ ಮಹಿಳೆಯ ಹೆಸರು ಪತ್ತೆಯಾಗಿಲ್ಲ. ಬಸವನಬಾಗೇಬಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.