ಇತ್ತಿಚ್ಚಿಗೆ ಎರಡು ದಿನದ ಹಿಂದೆ ಅಷ್ಟೇ ಹೃದಯಘಾತದಿಂದ ಯಾದಗಿರಿಯಲ್ಲಿ ಪಿಎಸ್ ಐ ಪರಶುರಾಮ್ ನಿಧನವಾಗಿದ್ದರು, ಅದರೆ ಅದು ಹೃದಯಘಾತ ಸಾವು ಅಲ್ಲ ಸ್ಥಳಿಯ ಶಾಸಕರ ಪುತ್ರ ಹಣಕ್ಕೆ ಒತ್ತಡ ಹಾಕಿದ ಕಾರಣ ಹೃದಯಘಾತವಾಗಿದೆ ಇದಕ್ಕೆ ಸರ್ಕಾರದ ಭ್ರಷ್ಟಾಚಾರವೇ ಕಾರಣಎ ಎಂದು ವಿರೋಧ ಪಕ್ಷಗಳು ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡೆದಸಿದರು.
ನಿನ್ನೆ ಅಷ್ಟೇ ಯಾದಗಿರಿಯಲ್ಲಿ ಮೃತಪಟ್ಟ ಪಿಎಸ್ಐ ಶ್ರೀ ಪರಶುರಾಮ್ ಅವರ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮಕ್ಕೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಭೇಟಿ ನೀಡಿ ಮೃತ ಪರಶುರಾಮ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ಧಾರೆ.ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಹಾಲಪ್ಪ ಆಚಾರ್, ರಾಜ್ಯ ಉಪಾಧ್ಯಕ್ಷರಾದ ಶ್ರೀ ರಾಜು ಗೌಡ, ವಿಧಾನ ಸಭಾ ವಿರೋಧ ಪಕ್ಷ ಮುಖ್ಯ ಸಚೇತಕರಾದ ಶ್ರೀ ದೊಡ್ಡನಗೌಡ ಹೆಚ್ ಪಾಟೀಲ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.