ವಿಜಯಪುರ: ಒಳಗಾಂಗಣ ಈಜುಕೊಳವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಜುವುದರ ಮೂಲಕ ಉದ್ಘಾಟಿಸಿದರು.
ನಗರದ ಕನಕದಾಸ ಬಡಾವಣೆಯಲ್ಲಿರುವ ನೂತನ ಒಳಾಂಗಣ ಈಜುಕೊಳವನ್ನು ಇದಕ್ಕೂ ಮೊದಲು ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 3.25 ಕೋಟಿ ವೆಚ್ಚದಲ್ಲಿ ಈ ಈಜುಕೊಳವನ್ನು ನಿರ್ಮಾಣ ಮಾಡಲಾಗಿದೆ. ಈ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೂಡ ಸ್ವೀಮಿಂಗ್ ಮಾಡಿದರು.