ವಿಜಯಪುರ: I.N.D.I.A ಅಲೈನ್ಸ್ನಲ್ಲಿ ಹಾವು-ಮುಂಗುಸಿ ಸೇರಿವೆ ಎಂದು ಸಂಸದ ತೇಜಸ್ವಿ ಸೂರ್ಯ ಲೇವಡಿ ಮಾಡಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಒಬ್ಬರು ಒಬ್ಬರನ್ನು ಬೈತಾರೆ, ಅವರೆಲ್ಲ ಸೇರಿ ಅಲೈನ್ಸ್ ಮಾಡಿಕೊಂಡಿದ್ದಾರೆ. ಹಾವು ಮುಂಗುಸಿ ಸೇರಿ ಅಲೈನ್ಸ್ ಮಾಡಿಕೊಂಡಿವೆ. ಆಮ್ ಆದ್ಮಿ ದಿನಾ ಬೆಳಗಾದ್ರೆ ಕಾಂಗ್ರೆಸ್ಗೆ ಬೈತಾರೆ. ಘಟಬಂದನ್ನಲ್ಲಿ ಆಮ್ ಆದ್ಮಿ ಇದ್ದಾರೆ. ಟಿಎಂಸಿನವರು ಕಾಂಗ್ರೆಸ್.ಗೆ ಬೈತಾರೆ. ಅಲೈನ್ಸ್ ಪಾಟ್ನರ್ಗಳ ಸಂಬಂಧ ಇದು ಎಂದರು. ಅಲ್ಲದೇ, ಕಾಂಗ್ರೆಸ್ ಪಾರ್ಟಿಯಲ್ಲು ಒಗ್ಗಟ್ಟಿಲ್ಲ. ಟಿಎಂಸಿ ಖರ್ಗೆ ಪ್ರಧಾನಿ ಆಗಲಿ ಅಂತಾರೆ. ಆದ್ರೆ, ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆಗೆ ಸಪೋರ್ಟ್ ಮಾಡ್ತಿಲ್ಲ. ಕಾಂಗ್ರೆಸ್ ಖರ್ಗೆ ಅವರಿಗೆ ಬೆಂಬಲಕೊಡ್ತಿಲ್ಲ. ಇನ್ನು ಹಾವು ಮುಂಗುಸಿ ಒಗ್ಗಟ್ಟಿಗೆ ಬಂದ್ರೆ ಸಮ್ಮಿಶ್ರ ಪಡೆ ಕಟ್ಟಲಿಕ್ಕಾಗತ್ತಾ?*
ಇದೊಂದು ಅನ್ ನ್ಯಾಚುರಲ್ ಅಲೈನ್ಸ್. ಶುರುವಾದಾಗಿನಿಂದಲೇ ಸಾರ್ಟಿಂಗ್ ಪ್ರಾಬ್ಲೆ ಇದೆ ಎಂದು ವಾಗ್ದಾಳಿ ನಡೆಸಿದರು. ಇಂಥವರು ದೇಶದ ಒಗ್ಗಟ್ಟು ಹೇಗೆ ತರೋಕೆ ಸಾಧ್ಯ? ಪ್ರಧಾನಿ ಪಟ್ಟಕ್ಕೆ ಟಿಎಂಸಿ, ಶಿವಸೇನೆ ಖರ್ಗೆ ಹೆಸ್ರು ಸೂಚಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಮುಜುಗರ ಆಗಿದೆ. ಸೋನಿಯಾ ಗಾಂಧಿ, ಸಿದ್ದರಾಮಯ್ಯ ಮೂಲಕ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳಿಕೆ ಕೊಡಿಸುವ ಹಿಂದಿನ ಪಾರುಪತ್ಯ ಮುಂದುವರೆಸುತ್ತಿದ್ದಾರೆ. ಅಲೈನ್ಸ್ ಗೆ ಹಳ್ಳಿಗಳಲ್ಲಿ ಕೇಡರ್ ಇಲ್ಲ. ಮೇಲ್ಮಟ್ಟದಲ್ಲಿ ಲೀಡರ್ ಇಲ್ಲ. ಬಿಎಸ್ವೈ ವಿರುದ್ಧ ಯತ್ನಾಳ್ 40 ಸಾವಿರ ಕೋಟಿಯ ಕೋವಿಡ್ ಹಗರಣ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ತೇಜಸ್ವಿ, ಇದು ರಾಜಕೀಯ ಕಾರ್ಯಕ್ರಮ ಅಲ್ಲ ಎಂದು ನಯವಾಗಿ ಪ್ರತಿಕ್ರಿಯೆಗೆ ನಕಾರ ಮಾಡಿದರು. ಯತ್ನಾಳ್ ಉಚ್ಚಾಟಿಸುತ್ತಾರಾ ಎನ್ನುವ ಪ್ರಶ್ನೇಗೆ ನಂತರದಲ್ಲಿ ಎಲ್ಲದಕ್ಕೂ ಉತ್ತರ ಕೊಡುವೆ ಎಂದು ತೇಜಸ್ವಿ ಹೇಳಿದರು.