ವಿಜಯಪುರ: ತಾಂತ್ರಿಕ ಸಮಸ್ಯೆಯಿಂದಾಗಿ ಶಿಕ್ಷಕರ ನೇಮಕಾತಿಯಾದ ಅಭ್ಯರ್ಥಿಗಳ 1:2 ದಾಖಲಾತಿ ಪರಿಶೀಲನಾ ಕಾರ್ಯ ವಿಳಂಬ ಆಗಿದೆ ಎಂದು ಡಿಡಿಪಿಐ ಉಮೇಶ ಶಿರಹಟ್ಟಿಮಠ ಮಾಹಿತಿ ನೀಡಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಆನ್ಲೈನ್ ಸಮಸ್ಯೆಯಿಂದಾಗಿ ನೇಮಕಾತಿಯ ಪರಿಶೀಲನಾ ಸ್ಥಗಿತವಾಗಿತ್ತು. ಆದ್ರೂ ದಿನನಿತ್ಯ 150 ಅಭ್ಯರ್ಥಿಗಳ ದಾಖಲಾತಿ ಮಾಡುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಅಭ್ಯರ್ಥಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.