ವಿಜಯಪುರ: ಕಳೆದ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ 15 ಮನೆಗಳು ಹಾನಿಯಾಗಿದೆ ಎಂದು ವಿಜಯಪುರ ಜಿಲ್ಲಾಡಳಿತ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ದೇವರಹಿಪ್ಪರಗಿಯಲ್ಲಿ 1, ಕೊಲ್ಹಾರದಲ್ಲಿ 3, ಇಂಡಿ 3, ತಿಕೋಟಾ 2, ತಾಳಿಕೋಟೆ 4, ಚಡಚಣ 2 ಮನೆಗಳು ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಜಯಪುರ ನಗರ ಹಾಗೂ ತಾಲೂಕಿನಾದ್ಯಂದ ಜುಲೈ 14 ಸಂಜೆಯಿಂದ ರಿಂದ ಜುಲೈ 15ರ ಬೆಳಗ್ಗೆ ವರೆಗೂ ಸಾಧಾರಣ ಮಳೆ ಆಗಿದೆ. ವಿಜಯಪುರ ನಗರದಲ್ಲಿ 1.36, ಬಬಲೇಶ್ವರ 1, ಸಿಂದಗಿ 1.07, ತಿಕೋಟಾ 1.12, ಇಂಡಿ 0.34, ಚಡಚಣ 2.15, ಬಸವನಬಾಗೇಬಾಡಿ1.16, ಮುದ್ದೇಬಿಹಾಳ 1.7 2ಮೀಟರ್ ನಷ್ಟು ಮಳೆ ಆಗಿದೆ. ಅಲ್ಲದೇ, ಜಿಲ್ಲಾದ್ಯಂತ ಸರಾಸರಿ 0.84 ಮಿಲಿ ಮೀಟರ್ ನಷ್ಟು ಮಳೆ ಆಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ
ಮಾಹಿತಿ ತಿಳಿಸಿದ್ದಾರೆ.