ವಿಜಯಪುರ: ವಿಜಯಪುರ ನಗರ ಹಾಗೂ ತಾಲೂಕಿನಾದ್ಯಂದ ಆಗಷ್ಟ್ 2ರ ಬೆಳಗ್ಗೆಯಿಂದ ಆಗಷ್ಟ್ 3ರ ಬೆಳಗ್ಗೆ ವರೆಗೂ ಉತ್ತಮ ಮಳೆ ಆಗಿದೆ. ವಿಜಯಪುರ ನಗರದಲ್ಲಿ 17.8, ಬಬಲೇಶ್ವರ 27, ಬಸವನಬಾಗೇಬಾಡಿ 12.16, ತಿಕೋಟಾ 10.7, ಸಿಂದಗಿ 9.3, ಮುದ್ದೇಬಿಹಾಳ 14.3, ದೇವರಹಿಪ್ಪರಗಿ 22.15 ಮೀಟರ್ ನಷ್ಟು ಮಳೆ ಆಗಿದೆ. ಅಲ್ಲದೇ, ಜಿಲ್ಲಾದ್ಯಂತ ಸರಾಸರಿ 16.38 ಮಿಲಿ ಮೀಟರ್ ನಷ್ಟು ಮಳೆ ಆಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
ಅಲ್ಲದೇ, ವಿಜಯಪುರ ಜಿಲ್ಲಾದ್ಯಂತ ಸುರಿಯುತ್ತಿರುವ ಭಾರಿ ಮಳೆ, ಗಾಳಿಗೆ ಆಗಷ್ಟ್ 2 ರಿಂದ ಆಗಷ್ಟ್ 3ರ ವರೆಗೆ ಹಲವು ಮನೆಗಳು ಹಾನಿಯಾಗಿದೆ ಎಂದು ವಿಜಯಪುರ ಜಿಲ್ಲಾಡಳಿತ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಜಿಲ್ಲಾದ್ಯಂತ 13 ಮನೆಗಳು ಹಾನಿಯಾಗಿದೆ. ಇಂಡಿ ತಾಲ್ಲೂಕಿನ ಬಳ್ಳೊಳ್ಳಿ 3, ತಾಳಿಕೋಟೆ 2, ವಿಜಯಪುರ ತಾಲ್ಲೂಕಿನ 5, ಸಿಂದಗಿ 1, ತಿಕೋಟಾ 1, ನಿಡಗುಂದಿ 1 ಕಚ್ಚಾ ಮನೆ ಹಾನಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.