K1ನ್ಯೂಸ್ ಡೆಸ್ಕ್: ಖ್ಯಾತ ನಟಿ ನಯನತಾರ ಮತ್ತು ವಿಘ್ನೇಶ್ ಅವರು ಕೆಲವು ವರ್ಷಗಳ ಕಾಲ ಪ್ರೀತಿ ಮಾಡಿ ಇದೆ ತಿಂಗಳು ಮದುವೆಯನ್ನ ಮಾಡಿಕೊಂಡರು. ನಟಿ ನಯನತಾರ ಮತ್ತು ನಿರ್ದೇಶಕ ಹಾಗು ನಿರ್ಮಾಪಕ ವಿಘ್ನೇಶ್ ಅವರು ಹಲವು ವರ್ಷಗಳಿಂದ ಒಬ್ಬರನ್ನ ಒಬ್ಬರು ಇಷ್ಟಪಟ್ಟಿದ್ದು, ಈಗ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯನ್ನ ಮಾಡಿಕೊಂಡಿದ್ದಾರೆ. ಇನ್ನು ಮದುವೆಗೆ ಕೋಟಿ ಕೋಟಿ ಹಣವನ್ನ ಖರ್ಚು ಮಾಡಿದ ನಟಿ ನಯನತಾರ ಮತ್ತು ವಿಘ್ನೇಶ್ ಮದುವೆಯ ನಂತರ ತಿರುಪತಿಗೆ ಹೋಗಿ ತಿಮ್ಮಪ್ಪ ಸ್ವಾಮಿಯ ದರ್ಶನವನ್ನ ಪಡೆದುಕೊಂಡರು.
ತದನಂತರ ನಟಿ ನಯನತಾರ ಮತ್ತು ವಿಘ್ನೇಶ್ ಅವರ ಹನಿಮೂನ್ ತಯಾರಿಯನ್ನ ಮಾಡಿಕೊಂಡಿದ್ದು, ಅದಕ್ಕಾಗಿ ಅವರು ಖರ್ಚು ಎಷ್ಟು ಎಂದು ತಿಳಿದರೆ ನಿಮಗೆ ಒಮ್ಮೆ ಆಶ್ಚರ್ಯ ಆಗುತ್ತದೆ. ಹೋಟೆಲ್ ಬಹಳ ದುಬಾರಿ ಹೋಟೆಲ್ ಆಗಿದ್ದು ಒಂದು ದಿನ ಈ ಹೋಟೆಲ್ ಅಂಲ್ಲಿ ಉಳಿದುಕೊಳ್ಳಲು ಬರೋಬ್ಬರಿ 2 ಲಕ್ಷ ರೂಪಾಯಿಗೂ ಅಧಿಕ ಹಣವನ್ನ ಕಟ್ಟಬೇಕು.
ಹೌದು ನಟಿ ನಯನತಾರ ಮತ್ತು ವಿಘ್ನೇಶ್ ಅವರು ಬ್ಯಾಂಕಾಕ್ ನ ಪ್ರತಿಷ್ಠಿತ ಸಿಯಾನ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳು ಹೇಳುವ ಪ್ರಕಾರ ನಟಿ ನಯನತಾರ ಮತ್ತು ವಿಘ್ನೇಶ್ ಅವರು ತಮ್ಮ ಹನಿಮೂನ್ ಗಾಗಿ ಬರೋಬ್ಬರಿ 5 ಕೋಟಿಗೂ ಅಧಿಕ ಹಣವನ್ನ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.