ವಿಜಯಪುರ: NEP ಬೇಕು ಎಂದು ಆಗ್ರಹಿಸಿ ಕೋಟಿ ಸಹಿ ಸಂಗ್ರಹ ಅಭಿಯಾನ ವಿಜಯಪುರ ನಗರದ ದರ್ಬಾರ್ ಶಿಕ್ಷಣ ಸಂಸ್ಥೆಯಲ್ಲಿ ಆವರಣದಲ್ಲಿ ನಡೆಯಿತು. ಎಬಿವಿಪಿ ವಿಜಯಪುರ ಶಾಖೆಯ ವತಿಯಿಂದ ಸಹಿ ಸಂಗ್ರಹ ಮಾಡಲಾಯಿತು. ಈ ಅಭಿಯಾನದಲ್ಲಿ ಶಿಕ್ಷಣ ತಜ್ಞರು, ಮಾಜಿ ಸಿಂಡಿಕೇಟ ಸದಸ್ಯರು, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿ ಸಹಿ ಮಾಡಿದರು. ಎನ್ ಇ ಪಿ ಬೇಕೆ ಬೇಕು ಎಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಗ್ರಹಿಸಿದ್ರು.