ವಿಜಯಪುರ: ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಗುಣಮುಖವಾಗಲಿ ಎಂದು ವಿಜಯಪುರದ ಹಜರತ್ ಮುರ್ತುಜಾ ಖಾದ್ರಿ ದರ್ಗಾದಲ್ಲಿ ಅಲ್ಪಸಂಖ್ಯಾತರ ಪ್ರಾರ್ಥನೆ ನೆರವೇರಿಸಿದರು.
ಅಲ್ಪಸಂಖ್ಯಾತ ಮುಖಂಡ ಯಾಸೀನ್ ಜವಳಿ ನೇತೃತ್ವದಲ್ಲಿ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಬೇಗನೆ ಗುಣಮುಖರಾಗ್ಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಅಲ್ಲದೇ, ಸಿದ್ದೇಶ್ವರ ಶ್ರೀಗಳು ಅವರ ಆಧ್ಯಾತ್ಮದ ರಸಾನುಭೂತ ನೀಡಬೇಕು ಎಂದು ಅಲ್ಪಸಂಖ್ಯಾತರು ಮುಖಂಡರು ಹೇಳಿದರು.