ವಿಜಯಪುರ: ಜಿಲ್ಲೆಯ ಮದಭಾವಿ, ಭುರಣಾಪೂರ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಅವರು ಇಂದು ಪರಿಸಿಲಿಸಿದರು.
ಇದೆ ವೇಳೆ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಶ್ರೀ ಹಿರೇಗೌಡರ್ ಇವರು ಕಾಮಗಾರಿಯ ಪ್ರಗತಿಯ ಕುರಿತು ವಿವರ ನೀಡಿ ,ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-72 ವಿಮಾನಗಳ ಹಾರಾಟಕ್ಕಾಗಿ ಒಟ್ಟು ರೂ. 220.00 ಕೋಟಿಗಳಿಗೆ ಮಂಜೂರಾಗಿರುತ್ತದೆ.
ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ ಹಾಗೂ ಐಡೆಕ್ ಸಂಸ್ಥೆ, ಬೆಂಗಳೂರ ಇವರನ್ನು ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರನ್ನಾಗಿ (ಪಿ.ಎಮ್.ಸಿ) ನೇಮಿಸಲಾಗಿದೆ.
ಒಟ್ಟು ರೂ 220-00ಕೋಟಿಗಳ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮೊದಲನೇ ಹಂತದ ಕಾಮಗಾರಿಗಾಗಿ ರೂ 95-00 ಕೋಟಿಗಳು ಹಾಗೂ ಎರಡನೇ ಹಂತದ ಕಾಮಗಾರಿಗಾಗಿ ರೂ 125-00ಕೋಟಿಗಳನ್ನು ಕಾಯ್ದಿರಲಾಗಿದೆ.
ಮೊದಲನೇ ಹಂತ ರೂ. 95-00 ಕೋಟಿಗಳಲ್ಲಿ ರನ್ ವೇ, ಟ್ಯಾಕ್ಸಿ ವೇ, ಎಪ್ರಾನ್, ಇಸೋಲೇಶನ್ ಬೇ, ಕೂಡು ರಸ್ತೆ, ಒಳ ರಸ್ತೆಗಳು, ಪೆರಿಪೆರಲ್ ರಸ್ತೆಗಳು, ಹಾಗೂ ಇತರೆ ಕಾಮಗಾರಿಗಳನ್ನು ಅಭಿವೃಧ್ದಿಪಡಿಸಲಾಗುತ್ತಿದೆ.
ಮೊದಲನೇ ಹಂತದ ಕಾಮಗಾರಿಯನ್ನು ಮೆ: ಎಸ್.ಎಸ್. ಆಲೂರ ಕನಸ್ಟçಕ್ಸನ್ ಕಂಪನಿ ವಿಜಯಪುರ ಇವರಿಗೆ ಗುತ್ತಿಗೆ ಆಧಾರದ ಮೇಲೆ ರೂ. 95-20 ಕೋಟಿಗಳಿಗೆ ದಿನಾಂಕ: 04/01/2021 ರಂದು ವಹಿಸಿಕೊಡಲಾಗಿದ್ದು, ಈ ಕಾಮಗಾರಿಯನ್ನು ಪೂರ್ಣಗೊಳಿಸಲು 11 ತಿಂಗಳು ಕಾಲಾವಧಿಯನ್ನು ನಿಗದಿಪಡಿಸಲಾಗಿದೆ.
ಎರಡನೇ ಹಂತದ ರೂ. 125-00ಕೋಟಿಗಳಲ್ಲಿ ಪುನ: ಎರಡು ಉಪ ಕಾಮಗಾರಿಗಳಾಗಿ ವಿಂಗಡಿಸಲಾಗಿದೆ. ಸಿವಿಲ್ ಉಪಕಾಮಗಾರಿಗಾಗಿ ರೂ. 106 ಕೋಟಿಗಳು ಹಾಗೂ ಏವಿಯೋನಿಕ್ಸ/ಸೆಕ್ಯೂರಿಟಿ ಇಕ್ವ್ಯೂ ಪಮೆಂಟ್ಸ್ ಉಪಕಾಮಗಾರಿಗಾಗಿ ರೂ.19 ಕೋಟಿಗಳಿಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಸಿವಿಲ್ ಉಪಕಾಮಗಾರಿ ರೂ. 106.00 ಕೋಟಿಗಳಲ್ಲಿ ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿ.ಎಫ್.ಆರ್. ಕಟ್ಟಡ, ಕಂಪೌಂಡ ಗೋಡೆ ಹಾಗೂ ಇತರೆ ಕಾಮಗಾರಿಗಳನ್ನು ಅಭಿವೃಧ್ದಿಪಡಿಸಲು ರೂ. 79-00 ಕೋಟಿಗಳ ಟೆಂಡರನ್ನು ಈಗಾಗಲೇ ಕರೆಯಲಾಗಿದ್ದು, ಆರ್ಥಿಕ ಬಿಡ್ ಅನುಮೋದನೆ ಹಂತದಲ್ಲಿರುತ್ತದೆ ಹಾಗೂ ಶೀಘ್ರದಲ್ಲೆ ಕಾರ್ಯಾದೇಶ ನೀಡಿ, ಕೆಲಸ ಪ್ರಾರಂಭಿಸಲಾಗುವುದು.
ಸಿವಿಲ್ ಉಪಕಾಮಗಾರಿಯಲ್ಲಿ ಉಳಿದ ಮೊತ್ತ 27-00 ಕೋಟಿಗಳಲ್ಲಿ ವಿಮಾನ ನಿಲ್ದಾಣದ ಆವರಣದಲ್ಲಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವುದು, ವಿಮಾನ ನಿಲ್ದಾಣಕ್ಕೆ 24*7 ನೀರು ಸರಬರಾಜು ಮಾಡುವುದು, ವಿಮಾನ ನಿಲ್ದಾಣಕ್ಕೆ 2000 ಕಿಲೋ ವ್ಯಾಟ್ ನಿರಂತರ ವಿದ್ಯುತ್ ಸರಬರಾಜು ಮಾಡುವುದು, ಕಾಮಗಾರಿಯ ಮೇಲ್ವಿಚಾರಣೆ ಮಾಡುವ ತಾಂತ್ರಿಕ ಸಂಸ್ಥೆಗೆ (ಪಿ.ಎಮ್.ಸಿ) ಶುಲ್ಕ ಪಾವತಿ ಮಾಡುವುದು ಹಾಗೂ ಇತರೆ ಕಾಮಗಾರಿಗಳನ್ನು ನಿರ್ವಹಿಸಲಾಗುವುದು.
ಏವಿಯೋನಿಕ್ಸ/ಸೆಕ್ಯೂರಿಟಿ ಇಕ್ವ್ಯ ಪಮೆಂಟ್ಸ್ ಉಪಕಾಮಗಾರಿ ರೂ. 19.00 ಕೋಟಿಗಳಲ್ಲಿ ಬ್ಯಾಗೇಜ್ ಹ್ಯಾಂಡಲಿಂಗ್, ಸೆಕ್ಯೂರಿಟಿ ಸ್ಕ್ಯಾನರ್, ಲ್ಯಾನ್, ಎ.ಸಿ. ಪ್ಲೆöÊಟ್ ಇನಪಾರ್ಮೇಶನ್ ಡಿಸ್ಪ್ಲೇ ಹಾಗೂ ಇತರೆ ಕಾಮಗಾರಿಗಳನ್ನು ಅಭಿವೃಧ್ದಿಪಡಿಸಲು ಯೋಜಿಸಲಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿರುತ್ತದೆ.
ಜನೇವರಿ 2022 ವರೆಗೆ ಮೊದಲನೇ ಹಂತದ ಕಾಮಗಾರಿಯ ಭೌತಿಕ ಪ್ರಗತಿಯು 55% ಹಾಗೂ ಆರ್ಥಿಕ ಪ್ರಗತಿಯು 56% ಸಾಧಿಸಲಾಗಿದೆ.
ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-72 ದಿಂದ ಏರ್ಬಸ್-320 ವಿಮಾನಗಳ ಹಾರಾಟಕ್ಕೆ ಮೇಲ್ದರ್ಜೆಗೇರಿಸುವ ಪ್ರಕ್ರಿಯ ನಡೆಯುತ್ತಿರುವುದರಿಂದ ರನ್ ವೇ, ಟ್ಯಾಕ್ಸಿ ವೇ, ಎಪ್ರಾನ್, ಇಸೋಲೇಶನ್ ಬೇ ಹಾಗೂ ಇತರೆ ಕಾಮಗಾರಿಗಳ ವಿನ್ಯಾಸದಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ. ಮೂರನೇ ಹಂತದ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅವಶ್ಯವಿರುವ ರೂ. 120-00 ಕೋಟಿಗಳ ಅನುದಾನ ಮಂಜೂರಾತಿಗಾಗಿ ಕಾಯಲಾಗುತ್ತಿದೆ.
ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಮೂರನೇ ಹಂತದ ಕಾಮಗಾರಿಯ ವಿನ್ಯಾಸ ಹಾಗೂ ಅಂದಾಜು ಪತ್ರಿಕೆ ( ಡಿ.ಪಿ.ಆರ್.) ತಯಾರಿಕೆ ಹಂತದಲ್ಲಿರುತ್ತದೆ.ಮಾನ್ಯ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಮಾನ್ಯ ಜಿಲ್ಲಾಧಿಕಾರಿಗಳು ವಿಜಯಪುರ ರವರು ಪ್ರಗತಿಯಲ್ಲಿರುವ ಹಂತ-1 ರ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿ ರನ್ ವೇ ಜಿ.ಎಸ್.ಬಿ. ಪದರದ ದಪ್ಪ ಹಾಗೂ ಇತರೆ ಅಳತೆಗಳನ್ನು ಪರಿಶೀಲಿಸಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಪರಿವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು/ಗುತ್ತಿಗೆದಾರರು ವ್ಹಿ.ಆರ್.ಹಿರೇಗೌಡರ. ಕಾರ್ಯನಿರ್ವಾಹಕ ಇಂಜಿನೀಯರರು, ಲೋಕೋಪಯೋಗಿ ಇಲಾಖೆ
ವಿಭಾಗ ವಿಜಯಪುರ ,ಪಟ್ಟಣಶೆಟ್ಟಿ. ಕಾರ್ಯನಿರ್ವಾಹಕ ಇಂಜಿನೀಯರರು, ಕರ್ನಾಟಕ ನಗರ ನೀರು ಸರಬರಾಜು ಹಾಗೂ ನೈರ್ಮಲೀಕರಣ ನಿಗಮ ವಿಭಾಗ ವಿಜಯಪುರ, ಆರ್.ಎನ್.ಮಸಳಿ. ಸಹಾಯಕ ಇಂಜಿನೀಯರ ಲೋಕೋಪಯೋಗಿ ಇಲಾಖೆ ವಿಜಯಪುರ, ಜೋಸ್ ಥಾಮಸ್, ಪಿ.ಎಮ್.ಸಿ. ಟೀಮ್ ಲೀಡರ್, ಐಡೆಕ್ ಸಂಸ್ಥೆ ಬೆಂಗಳೂರು , ಎಸ್.ಎಸ್.ಆಲೂರ. ಗುತ್ತಿಗೆದಾರರು ಹಾಗೂ ಇತರರು ಉಪಸ್ಥಿತರಿದ್ದರು .