ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವಿಜಯಪುರ ವತಿಯಿಂದ 2021-22ನೇ ಸಾಲಿನ “ಸ್ಟಡಿ ಸರ್ಕಲ್ಸ್” ಕಾರ್ಯಕ್ರಮಗಳ ಅಡಿಯಲ್ಲಿ ಮುಂಬರುವ ಪೊಲೀಸ ಕಾನ್ಸಟೇಬಲ್ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯ ಕ್ರಮಕ್ಕನುಸಾರವಾಗಿ ಉಚಿತ ತರಬೇತಿ ನೀಡಲು ಆಹ್ವಾನಿಸಲಾಗಿದೆ.
ಉಚಿತ ತರಬೇತಿಗೆ ಹಾಜರಾಗಲು ಇಚ್ಛಿಸಿರುವ ಅಭ್ಯರ್ಥಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಖುದ್ದಾಗಿ ಹಾಜರಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು, ಪೋಲಿಸ ಕಾನ್ಸಟೇಬಲ್ ಹುದ್ದೆಗಳಿಗೆ ಸಲ್ಲಿಸಿದ ತಮ್ಮ ಅರ್ಜಿಯ ಪ್ರತಿ(ಝರಾಕ್ಸ್) ಹಾಗೂ ಆಧಾರ ಕಾರ್ಡ ಪ್ರತಿ(ಝರಾಕ್ಸ್)ಯೊಂದಿಗೆ ದಿನಾಂಕ: 15-02-2022 ಸಾಯಂಕಾಲ 5.30 ರೊಳಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಖುದ್ದಾಗಿ ಸಲ್ಲಿಸಿ, ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯ ಉದ್ಯೋಗಾಧಿಕಾರಿಗಳು, ವಿಜಯಪುರ ಇವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 08352-250383, 9110856771 ಸಂಪರ್ಕಿಸಲು ಕೋರಲಾಗಿದೆ.