ವಿಜಯಪುರ: ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಖಂಡಿಸಿ ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೂ ವಿಶ್ವ ಹಿಂದೂಪರಿಷತ್, ಭಜರಂಗದಳ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇನ್ನು ಪ್ರತಿಭಟನೆ ವೇಳೆಯಲ್ಲಿ ಜೈ ಶ್ರೀರಾಮ, ಜೈ ಭಜರಂಗದಳ ಎಂದು ಕಾರ್ಯಕರ್ತರ ಘೋಷಣೆ ಕೂಗಿದರು. ಅಲ್ಲದೇ, ಪ್ರತಿಭಟನಾಕಾರರು ಕೇಸರಿ ಶಾಲು ಧರಿಸಿದ್ದಾರೆ. ಇನ್ನು ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಪ್ರತಿಭಟನೆ ಆಗ್ರಹಿಸಿದರು.
ಅಲ್ಲದೇ ಈ ವೇಳೆಯಲ್ಲಿ ವಿಎಚ್ಪಿ ನಾಯಕಿ ಮಂಚಾಲೇಶ್ವರಿ ಮಾತನಾಡಿ, ಬಿಜೆಪಿ ಆಪರೇಷನ್ ಕಮಲ ಕೈ ಬಿಟ್ಟು ಹಿಂದುಗಳ ರಕ್ಷಣೆ ಮಾಡಬೇಕು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ನಾವು ಬಿಜೆಪಿ ಬಾವುಟ ಹಾರಿಸೋದಿಲ್ಲ. ನಾವು ಕೇಸರಿ ಬಾವುಟ ಹಾರಿಸುವ ನಮ್ಮ ಗುರಿ ಇದೆ ಎಂದರು.
ಇನ್ನು ಹಿಂದುಗಳು ರಕ್ತ ಹರಿಸಿ ಬಿಜೆಪಿಗೆ ಅಧಿಕಾರಿ ನೀಡಿದ್ದಾರೆ ಎಂದರು.
ಇನ್ನು ಭಜರಂಗದಳ ಕಾರ್ಯಕರ್ತೆ ಪೂಜಾ ಮಾತನಾಡಿ, ಭಾರತವನ್ನು ಹಿಜಾಬ್ ಮಾಡಲು ಬಂದ್ರೇ ಆಗು ತುಂಡುಗಳನ್ನಾಗಿ ತುಂಡಾಗಿ ಕತ್ತರಿಸುತ್ತೇವೆ ಎಂದು ಪೂಜಾ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಇನ್ನು ಛತ್ರಪತಿ ಶಿವಾಜಿ ಖಡ್ಗ್ ತೆಗೆದುಕೊಂಡು ಇಂಚಿಂಚು ಕಡಿಯಬೇಕಾಗುತ್ತದೆ ಎಂದರು. ಇನ್ನೂ ಹರ್ಷನ ಹತ್ಯೆ ಆರೋಪಿಗಳ ಬಂಧನ ಮಾಡಿದ್ದು ಸಂತಸ ತಂದಿದೆ. ಆದ್ರೇ, ಒಂದು ಗಂಟೆ ಸರ್ಕಾರ ನಮ್ಮ ಕೈಯಲ್ಲಿ ಕೊಟ್ರೇ 60 ಸಾವಿರನ್ನು ಕತ್ತರಿಸುತ್ತೇವೆ ಎಂದರು.