ವಿಜಯಪುರ: ಉಕ್ರೇನ್ನಿಂದ ವಿಜಯಪುರದ ವಿದ್ಯಾರ್ಥಿನಿ ಜಿಲ್ಲೆಗೆ ಆಗಮಿಸಿದ್ದಾಳೆ. ವಿಜಯಪುರದ ರಾಜರತ್ನಾ ಕಾಲೋನಿಯ ವಿವಿಧಾ ಪ್ರಭುಮಲ್ಲಿಕಾರ್ಜುನ ಮಠ ಇಂದು ವಿಜಯಪುರಕ್ಕೆ ಬಂದಿದ್ದಾರೆ. ಇನ್ನು ಮನೆಯಲ್ಲಿ ಮಗಳಿಗೆ ಸಿಹಿ ತಿನ್ನಿಸಿ ಪೋಷಕರು ಬರ ಮಾಡಿಕೊಂಡರು. ಇನ್ನು ಇದೇ ವೇಳೆಯಲ್ಲಿ ಮೊಮ್ಮಗಳನ್ನು ಆಡಿಸಿ ಬೆಳೆಸಿದ್ದ ವಿವಿಧಾ ಅಜ್ಜಿ ಮೊಮ್ಮಗಳನ್ನು ನೋಡಿ ಕಣ್ಣೀರು ಹಾಕಿದರು. ಅಲ್ಲದೇ, ಈ ಸಂದರ್ಭದಲ್ಲಿ ಸಂಬಂಧಿಕರು, ಅಕ್ಕಪಕ್ಕದವರ ಉಪಸ್ಥಿತರಿದ್ದರು.