ವಿಜಯಪುರ: ವಿಜಯಪುರ ನಗರದ ಖಾಸಭಾಗದ ಸ್ಮಶಾನದಲ್ಲಿ ವಾಸವಿದ್ದ ಹಾಸಿಂಬಿ ಎನ್ನುವ ವೃದ್ಧೆಯ ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.
ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ಸದಾಕಾಲವೂ ಮಿಡಿಯುವ ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ಗೀತಾಂಜಲಿ ಪಾಟೀಲ್ 40 ವರ್ಷಗಳಿಂದ ಸ್ಮಶಾನದಲ್ಲೆ ವಾಸವಿರುವ ಹಾಸಿಂಬಿಗೆ ಸೀರೆ, ಬಟ್ಟೆ, ಹಣ್ಣ-ಹಂಪಲು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ಜೊತೆಗೆ ಸ್ಮಶಾನದಲ್ಲಿ ವಾಸವಿರುವ ಮೂಲಕ ಸಂಕಷ್ಟದಲ್ಲಿ ಕಾಲ ಕಳೆಯುತ್ತಿರುವ ಹಾಸಿಂಬಿ ಸಹಾಯಕ್ಕೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.