ವಿಜಯಪುರ: ಪವರ್ ಸ್ಟಾರ್ ಪುನೀತರಾಜಕುಮಾರ ಅಭಿನಯದ ಜೇಮ್ಸ್ ಸಿನೆಮಾ ಭಾರಿ ಸದ್ದು ಮಾಡುತ್ತಿದೆ. ಇನ್ನೂ ವಿಜಯಪುರದ ಲಕ್ಷ್ಮಿ, ಡ್ರೀಮ್ಲ್ಯಾಂಡ್ ಸಿನೆಮಾ ಮಂದಿರದ ಎದುರು ಅಪ್ಪು ಅಭಿಮಾನಿಗಳು ಪಟಾಕಿ ಸಿಡಿಸಿ ಅಪ್ಪು ಹಬ್ಬವನ್ನು ಆಚರಿಸಿದರು. ಇನ್ನು ಸಿನೆಮಾ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಅಪ್ಪು ಎಂಟ್ರಿಗೆ ಹೂವು ಎರಚಿ ಸಂಭ್ರಮಿಸಿದರು. ಅಲ್ಲದೇ, ಸಿನೆಮಾ ಮಂದಿರದಲ್ಲಿ ಅಪ್ಪು ಅಪ್ಪು ಎಂದು ಘೋಷಣೆ ಕೂಗಿದರು. ಈ ವೇಳೆಯಲ್ಲಿ ಅಪ್ಪು ಅಭಿಮಾನಿಗಳು ನೂರಾರು ಅಭಿಮಾನಿಗಳು ಅಪ್ಪುಗೆ ಜೈಕಾರು ಕೂಗಿ ಹರ್ಷ ವ್ಯಕ್ತಪಡಿಸಿದರು.
ಅಲ್ಲದೇ, ಡ್ರೀಮಲ್ಯಾಂಡ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಪುನೀತ್ ಕಟೌಟ್ ಗೆ ಮಾಲಾರ್ಪನೆ, ಪುಷ್ಟಾರ್ಚನೆ ಹಾಗೂ ಹಾಲಿನ ಅಭಿಷೇಕ ಮಾಡಿದರು. ಇನ್ನೂ ಅಪ್ಪು ಅಭಿಮಾನಿಗಳು ಸಡಗರದಿಂದ ಪುನೀತ್ ಪೋಟೋ ಹಿಡಿದ ಘೋಷಣೆಗಳನ್ನು ಕೂಗಿದರು. ಈ ವೇಳೆಯಲ್ಲಿ ನೂರಾರು ಅಭಿಮಾನಿಗಳು ಕನ್ನಡ ಧ್ವಜ ಹಿಡಿದುಕೊಂಡು ಡ್ಯಾನ್ಸ್ ಮಾಡಿದರು. ಇನ್ನು ಇದೇ ವೇಳೆಯಲ್ಲಿ ಜೇಮ್ಸ್ ಚಿತ್ರ ಬಿಡುಗಡೆ ಹಿನ್ನಲೆ ನಗರದ ಡ್ರೀಮಲ್ಯಾಂಡ ಚಿತ್ರಮಂದಿರದ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ. ಇನ್ನು ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘ, ಬಿಎಲ್ಡಿಇ ಮೆಡಿಕಲ್ ಕಾಲೇಜು ಹಾಗೂ ಹಾಸ್ಪಿಟಲ್, ಯತ್ನಾಳ್ ಅಭಿಮಾನಿಗಳ ಸಂಘ ನೇತೃತ್ವ ರಕ್ತದಾನ ಶಿಬಿರ ನಡೆಯಿತು. ಅಲ್ಲದೇ ರಕ್ತದಾನ ಶಿಬಿರದಲ್ಲಿ ನೂರಾರು ಅಪ್ಪು ಅಭಿಮಾನಿಗಳು ರಕ್ತದಾನ ಮಾಡಿದರು. ಅಲ್ಲದೇ, ರಕ್ತದಾನ ಮಡಲು ಅಪ್ಪು ಅಭಿಮಾನಿಗಳು ಆಗಮಿಸುತ್ತಿದ್ದಾರೆ.