ವಿಜಯಪುರ: ದಿ ಪುನಿತ್ ರಾಜಕುಮಾರ ಭಾವಚಿತ್ರ ಹಿಡಿದು ಅಭಿಮಾನಿ ಕೆಂಡ ಹಾಯ್ದ ಘಟನೆ ನಡೆದಿದೆ.ಅಕ್ಕನ ಆಸೆಯಂತೆ ಪುನೀತ್ ರಾಜಕುಮಾರ ಪೋಟೋ ಹಿಡಿದುಕೊಂಡು ಯುವಕ ಕೆಂಡ ದಾಟಿದ್ದಾನೆ.
ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದಲ್ಲಿ ಘಟನೆ ನಡೆದಿದೆ. ಪಟ್ಟಣದ ವೀರಭದ್ರೇಶ್ವರ ಜಾತ್ರೆಯಲ್ಲಿ ಯುವಕ ಕೆಂಡ ಹಾಯ್ದಿದ್ದಾನೆ.ಕಳೆದ ಏಪ್ರೀಲ್ 2 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವೀರಭ ದ್ರೇಶ್ವರ ಜಾತ್ರೆಯ ಅಂಗವಾಗಿ ಕೆಂಡ ಹಾಯೋ ಪದ್ದತಿ ಜಾಲ್ತಿಯಲ್ಲಿದ್ದು,ಅದರ ಲ್ಲಿ ಅಪ್ಪು ಪೋಟೋ ಹಿಡಿದುಕೊಂಡು ಹರೀಶ್ ಕೊಠಾರಿ ಕೆಂಡ ಹಾಯ್ದಿದ್ದಾನೆ. ಹರೀಶ್ ಸಹೋದರಿ ಸಾವಿತ್ರಿ ಕೊಠಾರಿ ಆಶಯದಂತೆ ಪುನೀತ್ ಪೋಟೋ ಹಿಡಿದುಕೊಂಡು ಹರೀಶ ಕೆಂಡ ದಾಟಿದ್ದಾನೆ. ಇದಕ್ಕೂ ಮುನ್ನ ಮೆರವಣಿಗೆಯಲ್ಲಿ ಪುನೀತ್ ಭಾವಚಿತ್ರ ಹಿಡಿದುಕೊಂಡು ಹರೀಶ್ ಸಾಗಿದ್ದಾನೆ.ಈ ರೀತಿ ಪುನೀತ್ ಮೇಲಿನ ಸಹೋದರಿ, ಸಹೋದರನ ಅಭಿಮಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.