ವಿಜಯಪುರ: ವಿದ್ಯುತ್ ಗುತ್ತಿಗೆದಾರರ ಮೇಲೆ ಹೆಸ್ಕಾಂ ಅಧಿಕಾರಿ ಗೂಂಡಾವರ್ತನೆ ಖಂಡಿಸಿ ವಿಜಯಪುರ ನಗರದ ಹೆಸ್ಕಾಂ ಕಚೇರಿಯ ಎದುರು ಅನುಮತಿ ಪಡೆದ ವಿದ್ಯುತ್ ಗುತ್ತಿದಾರರ ಸಂಘದವರು ಪ್ರತಿಭಟನೆ ನಡೆಸಿದರು.
ತಿಕೋಟಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಿಎಸ್ ದೇಶಮುಖ ಗುತ್ತಿಗೆದಾರರ ಮೇಲೆ ಕ್ಷುಲ್ಲಕ ಕಾರಣಕ್ಕೆ ನಿಂದಿಸಿ ಗೂಂಡಾವರ್ತನೆ ಮಾಡುತ್ತಿದ್ದು ಖಂಡನೀಯ. ಅಲ್ಲದೇ, ದೇಶಮುಖ ವಿರುದ್ಧ ತಕ್ಷಣವೇ ಹಿರಿಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ದೇಶಮುಖನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಹೆಸ್ಕಾಂ ಅಧೀಕ್ಷಕ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.