ವಿಜಯಪುರ: ಪವಿತ್ರ ಹಬ್ಬ ರಂಜಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಸುರುಕುಂಬಾ ಮಾಡುವ ಹಿನ್ನಲೆ ಹೆಚ್ಚಿಗೆ ಹಾಲಿನ ಬೇಡಿಕೆ ಕೂಡಾ ಉಂಟಾಗುತ್ತದೆ. ಇದನ್ನು ಮನಗಂಡ ಕೆಎಂಎಪ್ ಸಂಸ್ಥೆ ಸುಮಾರ 1 ಲಕ್ಷ 75 ಸಾವಿರ ಲೀಟರ್ ಹಾಲನ್ನು ಬೇರೆ ಬೇರೆ ಜಿಲ್ಲೆಯಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ.
ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ಕೆ.ಎಂ ಎಪ್ ಸಂಸ್ಥೆಯವರು ಹೆಚ್ಚಿನ ಹಾಲನ್ನು ಬೇರೆ ಬೇರೆ ಜಿಲ್ಲೆಯಿಂದ ಆಮದು ಮಾಡಿಕೊಳ್ಳುತ್ತಾರೆ. ವಿಜಯಪುರದ ಕೆಎಂಎಫ್ ಸಂಸ್ಥೆ ವತಿಯಿಂದ ಪ್ರತಿ ದಿ 1 ಲಕ್ಷ 70 ಸಾವಿರ ಲೀಟರ್ ದಷ್ಟು ಹಾಲನ್ನು ಮಾರಾಟ ಮಾಡುತ್ತಾರೆ. ಆದರೆ ರಂಜಾನ್ ಹಬ್ಬದ ಈ ಸಂದರ್ಭದಲ್ಲಿ ಹಾಲಿನ ಬೇಡಿಕೆ ಹೆಚ್ಚಾಗುವದನ್ನು ಮನಗಂಡು ಶಿವಮೊಗ್, ಮೈಸೂರು, ಮಂಡ್ಯ, ಧಾರವಾಡ, ತುಮಕೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಿಂದ 1 ಲಕ್ಷ 70 ಸಾವಿರ್ ಲೀಟರ್ ಹಾಲನ್ನು ಆಮದು ಮಾಡಿಕೊಂಡಿದ್ದಾರೆ.