ವಿಜಯಪುರ: ಶ್ರೀಸಿದ್ಧೇಶ್ವರ ಸಂಸ್ಥೆಯ ಸಂಕ್ರಮಣದ ಮಹೋತ್ಸವ ಅಂಗವಾಗಿ ಶೃಂಗಾರಗೊಂಡ ವೇದಿಕೆಯ ಮೇಲೆ ಸಿದ್ಧರಾಮನ ಯೋಗ ದಂಡದೊಂದಿಗೆ ಕುಂಬಾರ ಗುಂಡಮ್ಮಳ ಅಕ್ಷತಾರ್ಪಣೆ ಬೋಗಿ ಕಾರ್ಯಕ್ರಮ ಕೋವಿಡ್-19 ಅಂಗವಾಗಿ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು.
ನಂತರ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಚರಿತ್ರೆ ಓದುವ ಕಾರ್ಯಕ್ರಮದೊಂದಿಗೆ ಶುಭ ಮಾಂಗಲ್ಯದ ಧಾರಣ ಅಕ್ಷತಾ ರೋಪಣ ಕಾರ್ಯಕ್ರಮದಲ್ಲಿ ತಮ್ಮ ಬಂಧುಬಾಂಧವರ ಮದುವೆಗೆ ಬಂದಂತೆ ಹೊಸ ಉಡುಗೆ ತೊಟ್ಟು ಸಹಸ್ರಾರು ಭಕ್ತರು, ತಾಯಂದಿರು ಭಾಗವಹಿಸಿದ್ದರು. ಶಾಸ್ತ್ರಬದ್ಧವಾಗಿ ಸಜ್ಜುಗೊಂಡ ಮದುವೆ ಮಂಟಪದಲ್ಲಿ ಸಿದ್ಧರಾಮನ ಕುಂಬಾರ ಕನ್ಯೆಯೊಬ್ಬಳ ಮೂರ್ತಿಗಳು ಮದುವೆ ಮಕ್ಕಳಾಗಿದ್ದರು. ಶಿವಯೋಗಿಯ ಯೋಗ ದಂಡದೊಂದಿಗೆ ವಿವಾಹ ಸಾಂಕೇತಿಸಲು ಸಾಲಂಕೃತಗೊಂಡ 7 ನಂದಿಕೋಲುಗಳು ಹಾಗೂ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಉತ್ಸವ ಮೂರ್ತಿಯು ಮನಸೂರೆಗೊಂಡವು. ಸಂಪ್ರದಾಯದಂತೆ ಪಂಚಕ ಮೀಟಿಯವರಾದ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ನಗರ ಶಾಸಕರು ಇವರ ಕುಟುಂಬ ಸದಸ್ಯರ ನೇತೃತ್ವದಲ್ಲಿ ಅಕ್ಷತಾಪರ್ಣೆ ಬೋಗಿ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿಸಿದರು.
ಅಕ್ಷತೆಯ ಕಾರ್ಯಕ್ರಮದ ವಿಧಿ ವಿಧಾನದ ಕಾರ್ಯಕ್ರಮವನ್ನು ವೇದಮೂರ್ತಿ ಮುರಗಯ್ಯಾ ಸಂಗನಬಸಯ್ಯಾ ಗಚ್ಚಿನಮಠ, ಶಿವಾನಂದ ಹಿರೇಮಠ, ಈರಯ್ಯ ಹಿರೇಮಠ ಪೂಜೆ ನೆರೆವೆರಿಸಿದರು.
ಈ ಜಾತ್ರೆಯಲ್ಲಿ ಯಾವುದೇ ಸಾಂಸ್ಕಂತಿಕ ಕಾರ್ಯಕ್ರಮಗಳು ಇಲ್ಲದೇ ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ಸರ್ಕಾರದ ಕೋವಿಡ್ ನಿಯಮದ ಪ್ರಕಾರ ಮಾಡಲಾಗುತ್ತಿದೆ.