ವಿಜಯಪುರ: ಭಾರತೀಯ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ನಿವೃತ್ತ ಬಿ ಎಸ್ ಎನ್ ಎಲ್ ನೌಕರ ನ ಮಗಳು ಸಾಧನೆ ಮಾಡಿದ್ದಾರೆ.
ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ವಿಜಯಪುರದ ಸವಿತಾ ಗೋಟ್ಯಾಳ 479ನೇ ರ್ಯಾಂಕ್ ಪಡೆದು ಗೆದ್ದು ಬೀಗಿದ್ದಾರೆ. ಈಗಾಗಲೇ 2020ರಲ್ಲಿ ಮೂರನೇ ಬಾರಿ ಅಟೆಂಪ್ಟ್ ಮಾಡಿ 626ನೇ ರ್ಯಾಂಕಿಂಗ್ ನಲ್ಲಿ ಸವಿತಾ ಪಾಸಾಗಿದ್ದರು.
ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದು ಮತ್ತೆ ಪ್ರಯತ್ನಿಸಿ ಉತ್ತಮ ಸಾಧನೆ ಮಾಡಿದ್ದು, ಸವಿತಾ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಸವಿತಾಳ ಅಕ್ಕ ಅಶ್ವಿನಿ ಗೋಟ್ಯಾಳ ಕೂಡ ಈಗಾಗಲೇ ಯು ಪಿ ಎಸ್ ಸಿ ಪಾಸಾಗಿದ್ದು ಪಂಜಾಬ್ ನಲ್ಲಿ ಐಪಿಎಸ್ ಅಧಿಕಾರಿಯಾಗಿದ್ದಾರೆ.