ವಿಜಯಪುರ: ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಹೊಸ ಪ್ರಯೋಗವೊಂದು ನಡೆಯುತ್ತಿದೆ. ವಿದ್ಯಾರ್ಥಿನಿಯರಿಗೆ ಡ್ರೋನ್ ಟ್ರೈನಿಂಗ್ ನೀಡುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ವಿವಿ ಕೈಹಾಕಿದೆ. ವಿವಿಯ ಪತ್ರಿಕೋಧ್ಯಮ ವಿಭಾಗದ ವಿದ್ಯಾರ್ಥಿನಿಯರಿಗೆ ಡ್ರೋನ್ ಆಫರೇಟಿಂಗ್ ಟ್ರೈನಿಂಗ್ ನೀಡಲಾಗ್ತಿದೆ. ಡ್ರೋನ್ ಮೂಲಕ ದೃಶ್ಯಗಳನ್ನ ಸೆರೆಹಿಡಿಯೋದು ಹೇಗೆ? ಆಫರೇಟಿಂಗ್ ಹೇಗೆ ಮಾಡ್ಬೇಕು ಅನ್ನೋದರ ಬಗ್ಗೆ ವಿಶೇಷ ತರಬೇತಿ ನೀಡಲಾಗ್ತಿದೆ.
ಮಹಿಳಾ ವಿವಿ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥರಾದ ಓಂಕಾರ್ ಕಾಕಡೆ ಮುಂದೆ ನಿಂತು ತಮ್ಮ ವಿದ್ಯಾರ್ಥಿನಿಯರಿಗೆ ವಿಜಯಪುರದ ತೊರವಿ ಹತ್ತಿರದ ಅಕ್ಕನ ವಿವಿಯಲ್ಲಿ ಟ್ರೈನಿಂಗ್ ಕೊಡಿಸುತ್ತಿದ್ದಾರೆ. ವಿವಿಯಲ್ಲಿ ಪತ್ರಿಕೋಧ್ಯಮದ ವಿಭಾಗದ 21 ವಿದ್ಯಾರ್ಥಿನಿಯರಿಗಾಗಿ ಡ್ರೋನ್ ಟೈನಿಂಗ್ ನಡೆಯುತ್ತಿದೆ. ಒಂದು ವಾರಗಳ ಕಾಲ ಈ ತರಬೇತಿ ನಡೆಯಲಿದೆ. 3 ರಿಂದ 4 ವಿದ್ಯಾರ್ಥಿನಿಯರ ಬ್ಯಾಚ್ ಮಾಡಿ ಡ್ರೋನ್ ತರಬೇತಿ ನೀಡಲಾಗ್ತಿದೆ.
ವಿಶೇಷ ಅಂದ್ರೆ ವಿದ್ಯಾರ್ಥಿನಿಯರು ಸಂಪೂರ್ಣವಾಗಿ ಡ್ರೋನ್ ಆಫರೇಟಿಂಗ್ ಕಲಿಯೋವರೆಗೆ ತರಬೇತಿ ನೀಡಲಾಗ್ತಿದೆ.