ವಿಜಯಪುರ: ಜಿಲ್ಲೆಯ ಇಂಡಿ ರೋಡ-ಲಚ್ಯಾಣ ರೈಲು ನಿಲ್ದಾಣಗಳ ಮಧ್ಯ ಅಂದಾಜು 30-35 ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತು ರೇಲ್ವೆ ನಿಲ್ದಾಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ವ್ಯಕ್ತಿ ವಾರಸುದಾರರ ಪತ್ತೆಗೆ ಪೋಲಿಸ್ ಉಪನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಪರಿಚತ ವ್ಯಕ್ತಿಯು 5 ಅಡಿ 7 ಇಂಚು ಎತ್ತರ, ಸಾದಗಪ್ಪು ಮೈಬಣ್ಣ, ತೆಳ್ಳನೆಯ ಸಣಕಲು ಮೈಕಟ್ಟು, ದುಂಡು ಮುಖ, ಮೊಂಡ ಮೂಗು, ಸುಮಾರು ಅರ್ಧ ಇಂಚು ಕಪ್ಪು ಬಣ್ಣದ ತಲೆಕೂದಲು, ಅರ್ಧ ಬೋಳು ತಲೆ, ಕುರುಚಲ ಕಪ್ಪು ಬಣ್ಣದ ದಾಡಿ, ಮೀಸೆವುಳ್ಳವನಾಗಿದ್ದಾನೆ. ಪತ್ತೆಯಾದ ಸಂದರ್ಭದಲ್ಲಿ ಕಡು ನೀಲಿ ಬಣ್ಣದ ತುಂಬು ತೋಳಿನ ಜಾಕೆಟ್, ಚಾಕಲೇಟ್ ಬಣ್ಣದ ರೇಡಿಮೆಡ್ ಪ್ಯಾಂಟ್, ಕೆಂಪು ಬಣ್ಣದ ಹಾಫ್ ಲೆಗಿನ್ಸ ಪ್ಯಾಂಟ್, ಕಪ್ಪು ಬಣ್ಣದ ಲೆದರ ಬೂಟುಗಳು ಧರಿಸಿರುತ್ತಾನೆ. ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಸಾರ್ವಜನಿಕರು ರೇಲ್ವೆ ಪೋಲಿಸ್ ಠಾಣೆ ಆರಕ್ಷಕ ಉಪ ನಿರೀಕ್ಷಕ ದೂ: 08352-250883, ರೇಲ್ವೆ ಪೋಲಿಸ್ ಕಂಟ್ರೋಲ್ ರೂಂ ದೂ:080-22871291 ಸಂಖ್ಯೆಗೆ ಮಾಹಿತಿ ಒದಗಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
![](https://karnataka1news.com/wp-content/uploads/2023/02/219442-body-1-860x516.webp)