K1N ಡೆಸ್ಕ್: ಬೇಸಿಗೆ ಆರಂಭವಾಗುತ್ತಿದ್ದಂತೆ ಜನತೆ ರಸ್ತೆ ಬದಿಯಲ್ಲಿ ಮಾಡುವ ಜ್ಯೂಸ್ ಕುಡಿಯುವ ಮೊದಲು ಕೆಲವಷ್ಟು ಸಂಗತಿಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ರಸ್ತೆ ಬದಿಯಲ್ಲಿ ಇರುವ ಕಬ್ಬಿನ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಇರುತ್ತಾನೆ. ಅವನೇ ಯಂತ್ರಕ್ಕೆ ಕಬ್ಬು ಹಾಕಿ ಆನ್ ಮಾಡಿ, ಹಾಲನ್ನು ಲೋಟಕ್ಕೆ ಹಾಕಿ ಕೊಡುತ್ತಾನೆ.
ಹೀಗೆ ಎಲ್ಲವನ್ನೂ ಮುಟ್ಟುವ ವ್ಯಕ್ತಿ ಕೈಗೆ ಗ್ಲೌಸ್ ಕೂಡಾ ಹಾಕಿರುವುದಿಲ್ಲ. ಇವುಗಳನ್ನು ಕಡ್ಡಾಯವಾಗಿ ಗಮನಿಸಿ. ಕಬ್ಬಿನ ಹಾಲನ್ನು ಮಾಡುವ ಯಂತ್ರಗಳನ್ನು ಸ್ವಚ್ಛ ಮಾಡಿರುವುದಿಲ್ಲ. ನಿಂಬೆಹಣ್ಣು, ಶುಂಠಿ ಅಥವಾ ಪುದೀನಾವನ್ನು ತೊಳೆಯದೆ ನೇರವಾಗಿ ಉಪಯೋಗಿಸುತ್ತಾನೆ. ಕೆಂಪಾದ ಕಬ್ಬಿನಿಂದ ಮಾಡಿದ ಕಬ್ಬಿನ ರಸವನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಅದು ಹಾಳಾದ ಕಬ್ಬಿನ ರಸ. ಈ ರೀತಿಯ ಕಬ್ಬಿನ ಹಾಲನ್ನು ಸೇವನೆ ಮಾಡುವುದರಿಂದ ನಿಮಗೆ ಅತಿ ಸಾರ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು. ಐಸ್ ಗುಣಮಟ್ಟವೂ ಆರೋಗ್ಯ ಕೆಡಲು ಕಾರಣವಾಗಬಹುದು.