ವಿಜಯಪುರ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸರ ಪಥ ಸಂಚಲನ ನಡೆಸಲಾಯಿತು.
ವಿಜಯಪುರ ನಗರದ ಗಾಂಧಿಚೌಕ ಪೊಲೀಸ್ ಠಾಣೆಯಿಂದ ಪಥ ಸಂಚಲನವು ಬಕ್ರೀದ್ ದಿನದಂದು ಶಾಂತಿ ಕಾಪಾಡಲು ಹಾಗೂ ಅಹಿತಕರ ಘಟನೆಗಳು ಆಗದಂತೆ ಪಥ ಸಂಚಲನ ನಡೆಸಲಾಯಿತು. ವಿಜಯಪುರ ಎಸ್ಪಿ ಹೆಚ್.ಡಿ.ಆನಂದಕುಮಾರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ನಗರದ ವಿವಿಧೆಡೆ ಸಂಚರಿಸಿದ ಪಥಸಂಚಲನದಲ್ಲಿ ಎರಡು ನೂರಕ್ಕೂ ಹಾಗು ಹೆಚ್ಚು ಪೊಲೀಸ ಸಿಬ್ಬಂದಿ ಭಾಗಿಯಾಗಿದ್ದರು.