ಬೆಂಗಳೂರು:
ವಿಜಯನಗರ ಜಿಲ್ಲೆಯ ತುಂಗಾಭದ್ರ ಜಲಾಶಯದ 19 ನಂಬರ್ ಗೇಟ್ ಎರಡು ದಿನದ ಹಿಂದೆ ಏಕಾಏಕಿಯಾಗಿ ಕಟ್ ಆಗಿರುವ ಹಿನ್ನೆಲೆಯಲ್ಲಿ ಗೇಟ್ ಮೂಲಕ ಅಫಾರ ಪ್ರಮಾಣದ ನೀರು ಹೋರಹೋಗುತ್ತಿರುವ ಕಾರಣ ನದಿ ದಂಡೆಯಲ್ಲಿ ಪ್ರವಾಹ ಬೀತಿ ಆಗುವ ಆತಂಕ ಕಾಡುತ್ತಿದ್ದು, ನಿನ್ನೆ ಅಷ್ಟೇ ಸ್ಥಳಕ್ಕೆ ಜಲಸಂಪಲ್ಮೂಲ ಸಚಿವರಾದ ಡಿ,ಕೆ ಶಿವಕುಮಾರ ಬೇಟಿ ನೀಡಿ ಪರಿಶಿಲನೆ ನಡೆಸಿ ದುರಸ್ಥಿ ಮಾಡಲು ಸೂಚಿಸಿದರು. ಇಂದು ಅದೇ ಸ್ಥಳಕ್ಕೆ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ ಬೇಟಿ ನೀಡಿ ಪರಿಶಿಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು ಬರಗಾಲದಿಂದ ತತ್ತರಿಸಿದ್ದ ಈ ಭಾಗದ ಜನತೆಗೆ ಅಣೆಕಟ್ಟು ತುಂಬಿದ ಸಂತೋಷದಲ್ಲಿರುವಾಗಲೇ,ಕಲ್ಯಾಣ ಕರ್ನಾಟಕ ಭಾಗದ ಜನರ ಜೀವನಾಡಿಯಾದ ವಿಜಯನಗರ ಜಿಲ್ಲೆಯ ತುಂಗಭದ್ರಾ ಡ್ಯಾಮ್ ನ ಕ್ರಸ್ಟ್ ಗೇಟ್ ಹಾನಿಯಾಗಿ ಅಪಾರ ಪ್ರಮಾಣದ ನೀರು ಹೊರಹೋಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೆನೆ ಎಂದರುಈ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ,ಬಿಜೆಪಿ ರಾಜ್ಯಾಧ್ಯಕ್ಷ ಬಿ,ವೈ ವಿಜಯಂದ್ರ ಸೇರಿದಂತೆ ಅನೇಕ ನಾಯಕರು ಉಪಸ್ಥಿತ್ತರಿದರು.