ವಿಜಯಪುರ: ಕೃಷ್ಣಾ ತಟದಲ್ಲಿ ಮತ್ತೇ ಚಿರತೆ ಹಾವಳಿ ಎದುರಾಗಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ ಗ್ರಾಮದ ಬಳಿಯ ಕಬ್ಬಿನ ಜಮೀನಿನಲ್ಲಿ ನಡೆದಿದೆ.
ಇನ್ನು ಚಿರತೆ ಮೇಕೆಯನ್ನು ಬಾಯಲ್ಲಿ ಹಿಡಿದುಕೊಂಡು ಕಬ್ಬಿನ ಜಮೀನಿನಲ್ಲಿ ಮರೆಯಾಗಿದೆ. ದೇವರಗೆಣ್ಣೂರ, ಬಬಲಾದಿ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಚಿರತೆ ಆತಂಕ ಆರಂಭವಾಗಿದೆ. ಅಲ್ಲದೇ, ಇನ್ನೂ ಜಮೀನಿಗೆ ಹೋಗಲು ಜನರು ಭಯ ವ್ಯಕ್ತಪಡಿಸಿದ್ದಾರೆ.
ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಬೋನ್ ಇಡಬೇಕೆಂದು ರೈತರು ಒತ್ತಾಯಿಸಿದ್ದಾರೆ