ವಿಜಯಪುರ: ವಿಜಯಪುರ: ವಿಜಯಪುರ ಜಿಲ್ಲಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಜಮೀನು, ದೇವಸ್ಥಾನ ಮಳೆ ನೀರಿನಿಂದ ಜಲಾವೃತಗೊಂಡಿವೆ.
ವಿಜಯಪುರ ಜಿಲ್ಲೆಯ
ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ಕಾಲುವೆಗೆ ಹರಿದ ನೀರಿನ ಜೊತೆ ಮಳೆ ನೀರು ಸೇರಿ ಹಳ್ಳ, ಬಾಂದಾರಗಳು ಭೋರ್ಗರೆಯುತ್ತಿವೆ. ಅಲ್ಲದೇ,
ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ತುಂಬಿ ಹರಿಯುತ್ತಿದ್ದು, ಇದರಿಂದ ಸಂಗಮನಾಥ ದೇವಾಲಯದ ಆವರಣದಲ್ಲಿ ಮೊಳಕಾಲು ಮಟ ನೀರಿನಲ್ಲೇ ಭಕ್ತರು
ದರ್ಶನ ಪಡೆಯುತ್ತಿದ್ದಾರೆ.
ಇನ್ನು ಸಂಗಮನಾಥ ಗರ್ಭ ಗುಡಿಯಲ್ಲೇ ಮೊಳಕಾಲಿನ ವರೆಗೆ ನೀರು ಹರಿಯುತ್ತಿದೆ.
ಜಿಲ್ಲೆಯ ಡೋಣಿ ನದಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಅಪಾರ ಪ್ರಮಾಣದ ನೀರು ಹರಿದು ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮಕ್ಕೆ ನೂರಾರು ಎಕರೆ ಜಮೀನು ಜಲಾವೃತಗೊಂಡಿವೆ. ಅಲ್ಲದೇ, ನದಿ ಪಾತ್ರದ ಜನರಲ್ಲಿ ಆತಂಕ ಎದುರಾಗಿದೆ.
ವಿಜಯಪುರ, ಧಾರವಾಡ ಹಾಗೂ ಬೆಳಗಾವಿ ಸಂಪರ್ಕಿಸೋ ರಸ್ತೆ ಮೇಲೆ ನೀರು ಹರಿದು ಬರುತ್ತಿದೆ. ಇದರಿಂದ ರಸ್ತೆ ಸಂಚಾರ ಬಂದ್ ಆಗೋ ಸಾಧ್ಯತೆ ಇದೆ.