ಚಡಚಣ: ಕರ್ನಾಟಕ ಕಾರ್ಯನಿರತ ಪತ್ರಿಕಾ ಸಂಘವು ಸಾಹಿತಿ ಡಿ.ವ್ಹಿ. ಗುಂಡಪ್ಪನವರ ಕೂಸು. ಸಂವಿಧಾನದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಎಂಬ ಮೂರು ಅಂಗಗಳಿದ್ದು, ನಾಲ್ಕನೇಯ ಅಂಗವೇ ಪತ್ರಿಕಾರಂಗವಾಗಿದೆ. ತಪ್ಪನ್ನು ತಿದ್ದುವ ಹಕ್ಕು ಪತ್ರಿಕಾರಂಗಕ್ಕಿದೆ. ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ ಅವರಿಗೆ ಗೌರವ ಸಿಗುವುದು. ಖಡ್ಗಕ್ಕಿಂತ ಹರಿತವಾದ ಲೇಖನಿ ಪತ್ರಿಕೆಯದು. ಈ ಸಂಘವು ಇನ್ನೂ ಅಭಿವೃದ್ಧಿ ಹೊಂದಲಿ ಎಂದು ವಿರಕ್ತಮಢದ ಷಡಕ್ಷರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಸಂಗಮೇಶ್ವರ ದೇವಾಲಯದ ಮಂಗಲ ಕಾರ್ಯಾಲಯದಲ್ಲಿ ಇಂದು ಜರುಗಿದ ತಾಲೂಕಾ ಪತ್ರಿಕಾ ದಿನಾಚರಣೆಯ ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತಾ, ಪ್ರಮಾಣ ವಚನ ಸ್ವೀಕರಿಸಿದಂತೆ ಸಾಗಿರಿ. ಯಾವುದಕ್ಕೂ ಒಳಗಾಗದೇ ವೃತ್ತಿಗೌರವಕ್ಕೆ ಧಕ್ಕೆ ತರದಂತೆ ನಡೆಯಿರಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಕಾನಿಪ ಅಧ್ಯಕ್ಷ ಅಲ್ಲಮಪ್ರಭು ಕರಜಗಿ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಜಯಪುರ ಕಾನಿಪ ಜಿಲ್ಲಾ ಅಧ್ಯಕ್ಷರ ಸಂಗಮೇಶ ಚೂರಿ, ಪತ್ರಕರ್ತರ ಕಾರ್ಡ ವಿತರಿಸಿ ಮಾತನಾಡಿದ ಅವರು, ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಈ ಸಂಘವು ಇದ್ದು, ಪವಿತ್ರ ಸಂಘಟನೆಯಾಗಿದೆ. ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಗೌರವದಿಂದ ಕೆಲಸಮಾಡಿರಿ ಎಂದರು…
ವಿಜಯಪುರ ಕಾನಿಪ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ಪತ್ರಿಕಾ ಸದಸ್ಯರುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು…
ನಿವೃತ್ತ ಯೋಧರಿಗೆ ಸನ್ಮಾನಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ, ನಕಲಿ ಪತ್ರಕರ್ತರು ಇದ್ದಾರೆ. ಅವರ ಕಡೆ ಎಚ್ಚರ ವಹಿಸಬೇಕು. ಮುಖಸ್ತುತಿ ಮಾಡದೆ ಕೆಲಸ ಮಾಡಿರಿ ಎಂದರು…
ಈ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ, ವೀರಮರಣ ಹೊಂದಿದ ಕುಟುಂಬದ ಸದಸ್ಯರುಗಳಿಗೆ ಸನ್ಮಾನ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪತ್ರಿಕಾ ವಿತರಕರಿಗೆ ಸನ್ಮಾನಗಳು ಜರುಗಿದವು…
ಕಾರ್ಯಕ್ರಮದಲ್ಲಿ ತಾಲೂಕಾ ಕಾನಿಪ ಅಧ್ಯಕ್ಷ ರಮೇಶ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ಮಾಜಿ ಜಿಲ್ಲಾಧ್ಯಕ್ಷ ಶರಣು ಮಸಳೆ, ಖಜಾಂಚಿ ರಾಹುಲ ಆಪ್ಟೆ, ಮಾಜಿ ಜಿಲ್ಲಾ ಅಧ್ಯಕ್ಷ ಸಚೇಂದ್ರ ಲಂಬು, ಜಿಲ್ಲಾ ಕಾರ್ಯಕಾರಣಿ ಸದಸ್ಯ ವಿನೋದ ಸಾರವಾಡ, ಮನೋಜ ಕಟಗೇರಿ, ಶಂಕರ ಹಾವಿನಾಳ, ತುಕಾರಾಮ ಕೋಳಿ, ಉಪಾಧ್ಯಕ್ಷರಾದ ಶಿವಯ್ಯ ಮಠಪತಿ, ಅನಿಲ ಕೊಡತೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಡೋಣಜಮಠ, ಕಾರ್ಯದರ್ಶಿ ಶ್ರೀಕಾಂತ ಬಗಲಿ, ಖಜಾಂಚಿ ವಿನಯ ಜೀರಂಕಲಗಿ, ಹಾಗೂ ತಾಲೂಕಿನ ಸರ್ವ ಸದಸ್ಯರು ಇದ್ದರು…
ಈ ಸಂದರ್ಭದಲ್ಲಿ ಸಾಹೇಬಗೌಡ ಬಿರಾದಾರ, ಭೀಮುಸಾಹುಕಾರ ಬಿರಾದಾರ, ಕಲ್ಲು ಉಟಗಿ, ಅಮನ ಕುಲಕರ್ಣಿ, ಜಿ.ಡಿ.ಪಾವಲೆ, ದೇವೆಂದ್ರಪ್ಪಗೌಡ ಪಾಟೀಲ, ಮಹಾದೇವ ಹಿರೆಕುರುಬರ, ಯುನುಸ್ಅಲಿ ಮಕಾನದಾರ, ಭೀಮ ವಾಳಿಖಿಂಡಿ, ಪ್ರವೀಣ ಕಲ್ಯಾಣಶೆಟ್ಟಿ ಸೇರಿದಂತೆ ಪಟ್ಟಣದ ನಾಗರಿಕರು ಉಪಸ್ಥಿತರಿದ್ದರು.