ವಿಜಯಪುರ: ಹಳ್ಳದಲ್ಲಿ ಶಿವಾಜಿ ಮೂರ್ತಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ
ಬಸವನಬಾಗೇವಾಡಿ ತಾಲೂಕಿನ ದಿಂಡವಾರ್ ಗ್ರಾಮದ ಹರಿವು ಹಳ್ಳದಲ್ಲಿ ನಡೆದಿದೆ.
ಹಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಬೇರೆ ಕಡೆಯಿಂದ ಶಿವಾಜಿ ಮೂರ್ತಿ ಕೊಚ್ಚಿಕೊಂಡು ಬಂದಿದೆ. ಅಲ್ಲದೇ, ಮೂರ್ತಿ ಅರ್ಧ ಭಗ್ನವಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ. ಇನ್ನು ಸ್ಥಳೀಯರು ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.