ವಿಜಯಪುರ: ‘ಗೂಡು ಕಟ್ಟಲು ನನಗೆ ಸಣ್ಣದೊಂದು ಮನೆಯನ್ನು ಕಟ್ಟಿ ಕೊಡಿ, ನಿಮಗೆ ನಾನು ದೊಡ್ಡ ಸೌಧವೊಂದನ್ನು ಕಟ್ಟಿಸಿಕೊಡುವೆ’ ಎನ್ನುತ್ತದೆ ರೇಷ್ಮೆ ಹುಳು. ಈ ವಿಚಾರವು ರೇಷ್ಮೆ ಬೇಸಾಯಕ್ಕೆ ಉತ್ತೇಜನ ನೀಡುವಂತಿದೆ ಎನ್ನುವ ಮಹತ್ವದ ಚರ್ಚೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಡೆದ ಮಾಹಿತಿ ಮನೆ ಕಾರ್ಯಕ್ರಮವು ವೇದಿಕೆಯಾಯಿತು.
ಸರ್ಕಾರ ವಿವಿಧ ಇಲಾಖೆಗಳ ಉದ್ದೇಶ-ಆಶಯ ಮತ್ತು ನಾನಾ ಯೋಜನೆಗಳ ಮಾಹಿತಿಯನ್ನು ಪ್ರತಿ ಮನೆಮನೆಗೆ ತಲುಪಿಸುವ ಹಿನ್ನೆಲೆಯಲ್ಲಿ ಯೋಜಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯಲ್ಲಿ ಮೊದಲನೇ ಬಾರಿಗೆ ರೂಪಿಸಿರುವ ಈ ವಿನೂತನ ಮಾಹಿತಿ ಮನೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಪತ್ರಕರ್ತರು ಪರಸ್ಪರ ಮುಖಾಮುಖಿಯಾಗಿ, ರೇಷ್ಮೆ ಇಲಾಖೆಯ ಯೋಜನೆಗಳ ಬಗ್ಗೆ ಸಮಗ್ರ ಚರ್ಚಿಸಿದರು.
ವಾರ್ತಾ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಮೊದಲನೆ ಬಾರಿಗೆ ನಡೆದ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೇಷ್ಮೆ ಇಲಾಖೆಯ ಉಪ ನಿರ್ದೇಶಕರಾದ ಸಿದ್ಧರಾಜು ಮತ್ತು ಸಹಾಯಕ ನಿರ್ದೇಶಕರಾದ ಬಿ.ವೈ.ಬಿರಾದಾರ ಅವರು ರೇಷ್ಮೆ ಇಲಾಖೆಯ ಹಲವಾರು ಯೋಜನೆಗಳು, ವಿಜಯಪುರ ಜಿಲ್ಲೆಯ ರೇಷ್ಮೆ ಬೆಳೆಗಾರರು, ಅವರ ಯಶೋಗಾಥೆ ಮತ್ತು ಗುರಿ-ಸಾಧನೆಗಳ ಬಗ್ಗೆ ಸಮಗ್ರವಾಗಿ ಪತ್ರಕರ್ತರಿಗೆ ವಿವರಿಸಿದರು. ಬಳಿಕ ಪತ್ರಕರ್ತರು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಅತೀ ಕಡಿಮೆ ಜಮೀನಿನಲ್ಲಿ ಅತೀ ಹೆಚ್ಚು ಆದಾಯ ತಂದುಕೊಡುವ, ಕಡಿಮೆ ನೀರಿನಲ್ಲಿ ಹೆಚ್ಚಿನ ಫಸಲು ಕೊಡುವ, ಪ್ರತಿ ತಿಂಗಳೂ ಆದಾಯ ಕೊಡುವ ಏಕೈಕೆ ಬೆಳೆ ರೈಷ್ಮೆಯಾಗಿದೆ. ರೇಷ್ಮೆ ಕೃಷಿಕರು ಯಾರು ಕೂಡ ಸಾಲ ಮಾಡಿರುವ ಉದಾಹರಣೆಗಳಿಲ್ಲ ಎನ್ನುವ ಹತ್ತಾರು ಆಶಾದಾಯಕ ವಿಚಾರಗಳು ಈ ಕಾರ್ಯಕ್ರಮದ ಮೂಲಕ ತಿಳಿದು ಬಂದವು.
203 ಹಳ್ಳಿಗಳಲ್ಲಿ ರೇಷ್ಮೆ ಬೆಳೆಗಾರರು: ಮಾಹಿತಿ ಮನೆ ವೇದಿಕೆಯಲ್ಲಿ ರೇಷ್ಮೆ ಅಧಿಕಾರಿಗಳು ಮಾತನಾಡಿದರು. ವಿಜಯಪುರ ಜಿಲ್ಲೆಯಲ್ಲಿ 213 ರೇಷ್ಮೆ ಬೆಳೆಗಾರರಿದ್ದಾರೆ. ವಿಜಯಪುರ, ಇಂಡಿ ಮತ್ತು ಮುದ್ದೇಬಿಹಾಳ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೇಷ್ಮೆ ಕೃಷಿಕರಿದ್ದಾರೆ. ರೇಷ್ಮೆ ಬೇಸಾಯ ಮಾಡಲು ಮುಂದೆ ಬರುವವರಿಗೆ ಮನೆ ಮತ್ತು ಶೆಡ್ಗಳ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತದೆ. ಬ್ಯಾಂಕಿನಿAದ ಸಾಲಸೌಲಭ್ಯ ಸಿಗಲಿದೆ. ತಲಾ 100 ಮೊಟ್ಟೆಗೆ 1000 ರೂ. ಸಹಾಯಧನ ಸೌಕರ್ಯವಿದೆ. ಉತ್ತಮ ಗಾಳಿ ಮತ್ತು ಬೆಳಕು ಬರುವ ಹಾಗೆ ಶೆಡ್ ನಿರ್ಮಾಣ ಮಾಡಿ, ಎಕರೆ ಜಮೀನಿನಲ್ಲಿ 435ರಷ್ಟು ಗಿಡಗಳನ್ನು ಬೆಳೆಸಿ, ರೇಷ್ಮೆ ಬೇಸಾಯ ಆರಂಭಿಸಿದಲ್ಲಿ 1 ಎಕರೆ ಜಮೀನಿನಲ್ಲಿ 3 ಲಕ್ಷ ಆದಾಯ ತೆಗೆಯಬಹುದಾಗಿದೆ ಎಂದು ತಿಳಿಸಿದರು.

ಲಾಭ ಕೊಡುವ ಬೆಳೆ: ಕೋಲಾರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ತುಮಕೂರ ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿರುವುದಕ್ಕೆ ಎಕರೆ, ಎರಡೆಕರೆ ಅತೀ ಕಡಿಮೆ ಜಮೀನು ಹೊಂದಿರುವುದು ಕೂಡ ಕಾರಣವಿದೆ. 10 ಗುಂಟೆ ಜಮೀನಿದ್ದವರು ಅದರಲ್ಲಿಯೇ ಅವರು ಬದುಕಿ ತೋರಿಸಬೇಕಿದೆ. ಹೀಗಾಗಿ ಅತಿ ಕಡಿಮೆ ಜಮೀನಿನಲ್ಲಿ ಲಾಭ ಕೊಡುವ ಬೆಳೆ ಎಂದು ಅವರು ರೇಷ್ಮೆ ಹಾಕುತ್ತಾರೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಮೀನು ಇರುವವರು ಬೇರೆ ಬೇರೆ ಬೆಳೆಗಳನ್ನು ತೆಗೆಯಲು ಮುಂದಾಗುತ್ತಾರೆ. ಅತೀ ಶ್ರಮವನ್ನು ಬೇಡುವ ರೇಷ್ಮೆ ಬೆಳೆಯಲು ಮನಸು ಮಾಡುವುದಿಲ್ಲ ಎಂದು ತಿಳಿಸಿದರು.
ಪೂರಕ ವಾತಾವರಣ: ಈ ವರ್ಷ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ರೇಷ್ಮೆ ಬೇಸಾಯಕ್ಕೆ ಪೂರಕವಾದ ವಾತಾವರಣವಿದೆ. ಈ ಬಾರಿ ರೈತರಿಂದ ನರ್ಸರಿ ಬೆಳೆಸಿ ಪ್ರೋತ್ಸಾಹ ನೀಡುತ್ತಿದ್ದೇವೆ. ರೇಷ್ಮೆ ಕೃಷಿಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಲಾಭವಾಗುತ್ತಿರುವುದರಿಂದ ಬಹುತೇಕ ರೈತರು ರೇಷ್ಮೆ ಬೇಸಾಯ ಕೈಬಿಡದೇ 20 ವರ್ಷಗಳಿಂದಲೂ ಅದನ್ನೆ ಮಾಡುತ್ತಿದ್ದಾರೆ. ಬಾಗೇವಾಡಿ, ಶಿವಣಗಿ, ಹಡಗಲಿ, ಮಸಬಿನಾಳ ಮತ್ತು ಮನಗೂಳಿ ಭಾಗದಲ್ಲಿನ ಕೆಲವು ರೇಷ್ಮೆ ಬೆಳೆಗಾರರ ಯಶೋಗಾಥೆ ಇತರರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ರೈತರ ಮನೋಭಾವ ಬದಲಾಗಲಿ: ರೇಷ್ಮೆ ಕೃಷಿಯಲ್ಲಿ ಈಗ ಸಾಕಷ್ಟು ಬದಲಾವಣೆಯಾಗಿದೆ. ಹೊಸಹೊಸ ತಳಿಗಳು ಬಂದಿವೆ. ಉತ್ತಮ ತಳಿ ಹಾಕಿದರೆ ಯಾವುದೇ ರೋಗರುಜಿನು ಹತ್ತಿರ ಸುಳಿಯುವುದಿಲ್ಲ. ಮೊದಲು ನಾಲ್ಕು ಬಾರಿ ಸೊಪ್ಪು ಹಾಕುತ್ತಿದ್ದೆವು. ಈಗ ಎರಡು ಬಾರಿ ಹಾಕಿದರೆ ಸಾಕು. ಕೀಟನಾಶಕ ಹೊಡೆಯಬೇಕು ಎನ್ನುವ ಕಿರಿಕಿರಿಯು ರೇಷ್ಮೆ ಕೃಷಿಯಲ್ಲಿಲ್ಲ. ಭೂಮಿಗೆ ಉತ್ತಮವಾಗಿ ತಿಪ್ಪೆಗೊಬ್ಬರ ಕೊಟ್ಟರೆ ಸಾಕು ಸಾಕಷ್ಟು ಇಳುವರಿ ಪಡೆಯಬಹುದಾಗಿದೆ. ರೈತರ ಮನೋಭಾವ ಬದಲಾಗಬೇಕು. ರೇಷ್ಮೆ ಕೃಷಿ ಮಾಡುವವರು ಸಾಲದ ಸುಳಿಗೆ ಬೀಳುವುದಿಲ್ಲ; ಬದಲಾಗಿ ಕೃಷಿಯ ಬಗ್ಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ರೇಷ್ಮೆಯು ಅತೀ ಶ್ರಮದಿಂದ ಮತ್ತು ಕಾಳಜಿಯಿಂದ ತೆಗೆಯಬೇಕಾದ ಬೆಳೆಯಾಗಿದೆಯಷ್ಟೇ ಎಂದು ತಿಳಿಸಿದರು.
ರೇಷ್ಮೆ ಇಲಾಖೆಯ ನಾನಾ ಯೋಜನೆಗಳ ಬಗ್ಗೆ ವಿವರಿಸಿ, ಸಾಮಾನ್ಯ ವರ್ಗದವರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೆಡ್ ಮತ್ತು ಮನೆಗಳ ನಿರ್ಮಾಣಕ್ಕೆ ಸಾಲ ಸಹಾಯಧನ ಸೌಲಭ್ಯಗಳ ಬಗ್ಗೆ ಅಂಕಿ ಸಂಖ್ಯೆವಾರು ವಿವರಿಸಿದರು. ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ಗವಿಸಿದ್ದ ಹೊಸಮನಿ ಉಪಸ್ಥಿತರಿದ್ದರು