ವಿಜಯಪುರ: ಮೂರು ದಿನಗಳ ವರೆಗೂ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಹವಿಸ್ತರಣ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 2 ರಿಂದ 4ರ ವರೆಗೂ ನಗರದ ದರ್ಬಾರ್ ಮೈದಾನದಲ್ಲಿ ಕೃಷಿ ಮೇಳ ನಡೆಯಲಿದೆ ಎಂದರು. ಕೃಷಿ ಮೇಳವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟನೆ ಮಾಡಲಿದ್ದಾರೆ. ಅಲ್ಲದೇ, ನಿಂಬೆ, ಸಾವಯವ ತೋಟಗಾರಿಕೆ ಸೇರಿದಂತೆ ವಿವಿಧ 50 ಕ್ಕೂ ಹೆಚ್ಚು ಸ್ಟಾಲ್ ಓಪನ್ ಮಾಡಲಾಗುವುದು. ಕೃಷಿ ಮೇಳದಲ್ಲಿ ಕಬ್ಬು, ನಿಂಬೆ ಸೇರಿದಂತೆ ವಿವಿಧ ಬೆಳೆಗಳ ಉಪಯುಕ್ತ ಮಾಹಿತಿ ನೀಡಲಾಗುವುದು ಎಂದರು. ಈ ವೇಳೆಯಲ್ಲಿ ಮಣ್ಣಿನ ಮೌಲ್ಯತೆ, ರಕ್ಷಣೆಯ ವಿಚಾರ, ಚಿಂತನೆ ನಡೆಯಲಿದೆ ಎಂದರು.