ವಿಜಯಪುರ: ಸತತವಾಗಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳ ಮೇಲೂ ಮಳೆ ನೀರು ಆವರಿಸಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಮಳೆ ನೀರಿನಿಂದ ಅವಾಂತರ ಸೃಷ್ಟಿ ಆಗಿದೆ.
ನಾಲತವಾಡ ಪಟ್ಟದಣಲ್ಲಿನ 13ನೇ ವಾರ್ಡ್ ನಲ್ಲಿ ನಿಂತಿರುವ ನೀರಿಂದ ವಾರ್ಡ್ನ ಮನೆಗಳ ಮುಂದೆಲ್ಲ ಓಡಾಡಲು ಸಮಸ್ಯೆ ಆಗುತ್ತಿದೆ. ಅಲ್ಲದೇ, ಇಲ್ಲಿನ ನಾಲ್ಕೈದು ಮನೆಗಳಿಗೆ ಮಳೆ ನೀರು ನುಗ್ಗಿದೆ. ಸಂಕಷ್ಟದಲ್ಲಿ ನಾಲತವಾಡ ನಿವಾಸಿಗಳು ಕಲಾ ಕಳೆಯುತ್ತಿದ್ದಾರೆ. ಅದಕ್ಕಾಗಿ ನಮ್ಮ ಸಮಸ್ಯೆಗಳನ್ನು ತಕ್ಷಣವೇ ಪುರಸಭೆಯವರು ಪರಿಹಾರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಅಲ್ಲದೇ, ಜಿಲ್ಲಾದ್ಯಂತ ಮಳೆ, ಗಾಳಿಗೆ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ವಿಜಯಪುರ ಜಿಲ್ಲಾಡಳಿತ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ಜಿಲ್ಲಾದ್ಯಂತ ಸೆಪ್ಟೆಂಬರ್ ಮಾಹೆಯಲ್ಲಿ 103 ಮನೆಗಳು ಹಾನಿಯಾಗಿದೆ. ಇನ್ನೂ ಓರ್ವ ಹಾಗೂ ಒಂದು ಜಾನುವಾರಿಗೆ ಜೀವ ಹಾನಿಯಾಗಿದೆ. ಅದಕ್ಕಾಗಿ ಎಸ್ಡಿಆರ್ಎಫ್ ಮಾರ್ಗಸೂಚಿ ಅನುಸಾರ ಪರಿಹಾರಧನ ನೀಡಲಾಗಿದೆ ಎಂದು ತಿಳಿಸಿದ್ದಾರೆ.