ವಿಜಯಪುರ: ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿಗೈದಿರುವ ಘಟನೆ ವಿಜಯಪುರದ ಸೊಲ್ಲಾಪುರ ರಸ್ತೆಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದಿದೆ.
ವಿಜಯಪುರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣವರ್ ನೇತೃತ್ವದಲ್ಲಿ ದಾಳಿಗೈದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮಾಡಿದರು. ಅಲ್ಲದೇ, ದಲ್ಲಾಳಿಗಳ ಹಾವಳಿಯ ದೂರುಗಳ ಹಿನ್ನಲೆ ಲೋಕಾಯುಕ್ತ ಅಧಿಕಾರಿಗಳು ದಾಳಿಗೈದು ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡಿದರು.
ದಾಳಿ ವೇಳೆಯಲ್ಲಿ ಅಧಿಕಾರಿಗಳಾದ ಅರುಣ್ ನಾಯಕ್, ಆನಂದ್ ಟಕ್ಕನವರ್, ಆನಂದ್ ದೋಣಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.