ವಿಜಯಪುರ: ಬೆಳಗ್ಗೆಯಿಂದ ಸಂಜೆವರೆಗೆ, ವರ್ಷಪೂರ್ತಿ ದುಡಿಯುವ, ನಗರವಾಸಿಗಳ ಆರೋಗ್ಯಕ್ಕೆ ಮತ್ತು ನಗರ ಶುಚಿತ್ವಕ್ಕೆ ಕಾರಣೀಕರ್ತರಾದ ನಗರದ ಪೌರ ಕಾರ್ಮಿಕರಿಗೆ ಆತ್ಮೀಯ ಸನ್ಮಾನ ಕಾರ್ಯಕ್ರಮವು ಸೆಪ್ಟೆಂಬರ್ 23ರಂದು ನಗರದ ಕಂದಗಲ್ ಶ್ರೀ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಅದ್ಧೂರಿಯಾಗಿ ನಡೆಯಿತು.
ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತ ಸಂಭ್ರಮದಿAದ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಷ್ಟೇ
ನೈರ್ಮಲ್ಯದ ಬಗೆಗಿನ ಹೋರಾಟವೂ ಅಷ್ಟೆ ಮಹತ್ವದ್ದಾಗಿದೆ ಎನ್ನುವ ಗಾಂಧೀಜಿಯವರ ವಿಚಾರಧಾರೆಯು ಸ್ವಚ್ಛತೆಯ ಮಹತ್ವವನ್ನು ತಿಳಿಸುತ್ತದೆ. ಸ್ವಚ್ಚತೆ ಇಲ್ಲದಿದ್ದರೆ ಯಾವ ರಾಷ್ಟ್ರವೂ ಮುಂದೆ ಬರಲು ಸಾಧ್ಯವಿಲ್ಲ. ಹೀಗಾಗಿ ವೈಯಕ್ತಿಕ ಮತ್ತು ಪರಿಸರ ಸ್ವಚ್ಚತೆಯತ್ತ ಪ್ರತಿಯೊಬ್ಬರು ಗಮನ ಹರಿಸಬೇಕು ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯು ಪ್ರವಾಸಿ ತಾಣವಾಗಿದೆ. ಇಂತಹ ನಗರದ ಶುಚಿತ್ವಕ್ಕೆ ಶ್ರಮಿಸುವ ಎಲ್ಲ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯವಾದುದು ಎಂದರು. ಪೌರ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಪಾವತಿಸುವ ವಿಷಯದಲ್ಲಿ, ಬೆಳಗಿನ ಉಪಹಾರಕ್ಕೆ 35 ರೂ ನೀಡುವಲ್ಲಿ ಮತ್ತು ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ವಿಷಯದಲ್ಲಿ ಉತ್ತಮ ಕಾರ್ಯ ಮಾಡಿ ಇಡೀ ರಾಜ್ಯದಲ್ಲೇ ವಿಜಯಪುರ ಮಹಾನಗರ ಪಾಲಿಕೆಯು ಉತ್ತಮ ಸ್ಥಳೀಯ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ಮನೆಯಿಲ್ಲದ ಪೌರ ಕಾರ್ಮಿಕರಿಗೆ ಮನೆಕೊಡುವ ಕಾರ್ಯದ ಜೊತೆಗೆ ನೇರ ನೇಮಕಾತಿ ಮತ್ತು ಹೊರಗುತ್ತಿಗೆ ಪೌರ ಕಾರ್ಮಿಕರಿಗು ಸಹ ಮನೆಗಳನ್ನು ಕೊಡುವ ಕಾರ್ಯವನ್ನು ಪಾಲಿಕೆಯ ಮಾಡುತ್ತಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಾರ್ಯದಷ್ಟೇ ಪೌರ ಕಾರ್ಮಿಕರ ಕಾರ್ಯ ಸಹ ಅಷ್ಟೇ ಮುಖ್ಯವಾಗಿದೆ. ಯಾವ ಕೆಲಸವೂ ಚಿಕ್ಕದಲ್ಲ, ಪ್ರತಿಯೊಂದು ಕಾರ್ಯಕ್ಕೂ ಅದರದೇ ಆದ ಘನತೆ-ಗೌರವ ಇರುತ್ತದೆ. ನಾವು ಮಾಡುವ ಕೆಲಸವನ್ನು ನಾವು ಗೌರವಿಸಬೇಕು. ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಒಳ್ಳೆಯ ಅಭ್ಯಾಸ ಕೊಡಿಸಬೇಕು. ವಿಶೇಷವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು.
ಪೌರ ಕಾರ್ಮಿಕರಿಗೆ ಇರುವ ಸೌಲಭ್ಯಗಳು, ಪೌರ ಕಾರ್ಮಿಕರ ಆರೋಗ್ಯ ಸೇರಿದಂತೆ ಇನ್ನೀತರ ವಿಷಯಗಳ ಬಗ್ಗೆ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ, ಮನೋವೈದ್ಯರಾದ ಡಾ.ಬಸವರಾಜ ಮಸಳಿ ಅವರು ವಿಶೇಷ ಉಪನ್ಯಾಸ ನೀಡಿದರು. ಲಕ್ಷ್ಮಣ ಹಂದ್ರಾಳ ಅವರು ಪೌರ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದರು.
ಉಪ ಆಯುಕ್ತರಾದ ಸಿದ್ದಪ್ಪ ಮಹಾಜನ, ವಲಯ ಆಯುಕ್ತರಾದ ರಮೇಶ ಜಾದವ, ಸಜ್ಜನ ಪಾಟೀಲ, ಪೌರ ಕಾರ್ಮಿಕರಾದ ಸುನಂದಾ ಚಲವಾದಿ, ರಾಯಪ್ಪ ಮುಂಡಗೋಡ, ಮುಖಂಡರಾದ ಪ್ರೇಮಾನಂದ ಬಿರಾದಾರ, ಅಶೋಕ ಸಜ್ಜನ ಹಾಗೂ ಇತರರು ಉಪಸ್ಥಿತರಿದ್ದರು. ಪೌರ ಕಾರ್ಮಿಕ ದಿನಾಚರಣೆಯ ನಿಮಿತ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ವಿಜೇತ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು.