ವಿಜಯಪುರ: ಸಿಡಿಲು ಬಡಿದು ಆಕಳುವೊಂದು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಸಮೀಪದ ಕೇಶ್ವಾಪುರ ಗ್ರಾಮದಲ್ಲಿ ನಡೆದಿದೆ.
ರೈತ ಶರಣಪ್ಪ ಜಲಕಮದಿನ್ನಿ ಎಂಬುವರಿಗೆ ಸೇರಿ ಆಕಳು ಸಾವನ್ನಪ್ಪಿದೆ. ಕಳೆದ ತಡರಾತ್ರಿ ಭಾರಿ ಮಳೆ, ಗಾಳಿಯೊಂದಿಗೆ ಸಿಡಿಲು ಆರಂಭವಾಗಿದೆ. ಈ ವೇಳೆಯಲ್ಲಿ ಮನೆಯ ಎದುರು ಕಟ್ಟಿರುವ ಆಕಳಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದೆ. ಅದಕ್ಕಾಗಿ ಪ್ರಕೃತಿ ವಿಕೋಪ ಅಡಿಯಲ್ಲಿ ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಶರಣಪ್ಪ ಮನವಿ ಮಾಡಿದ್ದಾರೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.