ವಿಜಯಪುರ: ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2022 ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಉಪ-ಚುನಾವಣೆ ನqಯುವ ವ್ಯಾಪ್ತಿಯಲ್ಲಿ ಆಯುಧ ಹಾಗೂ ಮದ್ದುಗುಂಡುಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಜಮಾ ಮಾಡಲು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶಿಸಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2022 ಹಾಗೂ ಗ್ರಾಮ ಪಂಚಾಯಿತಿ ಉಪ- ಚುನಾವಣೆ-2022 ನೇದ್ದರ ಪ್ರಯುಕ್ತ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲ್ಲಿ ಅಕ್ಟೋಬರ್ 10ರಿಂದ ಅಕ್ಟೋಬರ್ 31ರವರೆಗೆ ಹಾಗೂ ಗ್ರಾಮ ಪಂಚಾಯಿತಿ ಉಪ ಚುನಾವಣೆಯ ನಡೆಯುವ ಗ್ರಾಮ ಪಂಚಾಯಿತಿ 14-ಗುಣಕಿ, 17-ಜುಮನಾಳ, 7-ಅರಕೇರಿ, 6-ಬಿದರಕುಂದಿ,7-ಮಿರಗಿ, 11-ಗೊಲಗೇರಿ ಹಾಗೂ 24-ಗಬಸಾವಳಗಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅಕ್ಟೋಬರ್ 13ರಿಂದ ಅಕ್ಟೋಬರ್ 31ರವರೆಗೆ ಎಲ್ಲಾ ಆಯುಧ ಲೈಸನ್ಸದಾರರು ತಮ್ಮ ಎಲ್ಲಾ ಶಸ್ತ್ರಾಸ್ತ್ರ ಅಂದರೆ ಎಸ್.ಬಿ.ಬಿ.ಎಲ್/ಡಿ.ಬಿ.ಬಿ.ಎಲ್ ಬಂದೂಕು, ರೈಫಲ್, ರಿವಾಲ್ವರ್, ಪಿಸ್ತೂಲುಗಳನ್ನು ಹಾಗೂ ಮದ್ದುಗುಂಡುಗಳನ್ನು ಹೊಂದಲು ಕೊಟ್ಟ ಲೈಸನ್ಸಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಶಸ್ತ್ರಾಸ್ತ್ರ ಅಧಿನಿಯಮ-1959 ರ ಕಲಂ-17, (3ಬಿ)ರ ಪ್ರದತ್ತವಾದ ಅಧಿಕಾರದ ಮೇರೆಗೆ ಆದೇಶ ಹೊರಡಿಸಿದ್ದಾರೆ.
ಶಸ್ತಾçಸ್ತçಗಳ ಅಧಿನಿಯಮ-1959ರ ಕಲಂ-21 ರನ್ವಯ ವಿಜಯಪುರ ಜಿಲ್ಲೆಯಲ್ಲಿ ಶಸ್ತಾçಸ್ತç ಹೊಂದಿದವರು ತಕ್ಷಣವೇ ಸಮೀಪದ ಪೊಲೀಸ ಠಾಣೆಯಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಅವರು ಹೊಂದಿರತಕ್ಕ ಎಲ್ಲಾ ಶಸ್ತಾçಸ್ತçಗಳನ್ನು ಮತ್ತು ಮದ್ದುಗುಂಡುಗಳನ್ನು ಜಮೆ ಮಾಡತಕ್ಕದ್ದು., ಈ ಆದೇಶವು ಬ್ಯಾಂಕುಗಳು ಮತ್ತು ಫ್ಯಾಕ್ಟರಿಗಳು ಭದ್ರತೆಗೋಸ್ಕರ ತೆಗೆದುಕೊಂಡಿರುವ ಆಯುಧಗಳಿಗೆ ಅನ್ವಯಿಸುವುದಿಲ್ಲ.
ಪೊಲೀಸ್ ಇಲಾಖೆಯು ತಮ್ಮಲ್ಲಿ ತಂದಿರಿಸಿದ ಶಸ್ತ್ರಾಸ್ತ್ರ ಸುರಕ್ಷಿತವಾಗಿ ಅಭಿರಕ್ಷೆಯಲ್ಲಿಡುವುದಕ್ಕೆ ಸೂಕ್ತ ವ್ಯವಸ್ಥೆ ಮಾಡತಕ್ಕದ್ದು. ಶಸ್ತಾçಸ್ತçಗಳನ್ನು ತಂದಿಡುವ ಲೈಸನ್ಸದಾರರಿಗೆ ಸೂಕ್ತ ರಶೀದಿಯನ್ನು ಕೊಡತಕ್ಕದ್ದು., ಶಸ್ತ್ರಾಸ್ತ್ರ ಅಧಿನಿಯಮ-1959ರ ಕಲಂ:25 (1-ಬಿ) (ಎಚ್) ರನ್ವಯ ಶಸ್ತಾçಸ್ತçಗಳನ್ನು ಮತ್ತು ಮದ್ದುಗುಂಡುಗಳನ್ನು ನಿಗದಿತ ಅವಧಿಯೊಳಗೆ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಜಮೆ ಮಾಡದಿದ್ದಲ್ಲಿ (ಎರಡು ವರ್ಷಗಳ ವರೆಗೆ ಆದರೆ ಐದು ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ದಂಡ ಕಟ್ಟುವ ಹೊಣೆ) ಕಾರಾಗೃಹ ಶಿಕ್ಷೆ ಮತ್ತು ಜುಲ್ಮಾನೆಯ ದಂಡನೆಗಳಿಗೆ ಲೈಸನ್ಸದಾರರು ಭಾಧ್ಯಸ್ಥರಾಗಿರುತ್ತಾರೆ. ಈ ಆದೇಶವು ಮೇಲ್ಕಂಡ ಅವಧಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ. ದಿನಾಂಕ.31-10-2022 ರ ನಂತರ ತನ್ನಿಂದ ತಾನೇ ರದ್ದಾಗುತ್ತದೆ. ಎಲ್ಲ ಶಸ್ತಾçಸ್ತçಗಳನ್ನು ಮತ್ತು ಮದ್ದುಗುಂಡುಗಳನ್ನು ಸಂಬAಧಿಸಿದ ಲೈಸನ್ಸದಾರರಿಗೆ ದಿನಾಂಕ.01-11-2022 ರಂದು ಮರಳಿ ಕೊಡತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.