ವಿಜಯಪುರ: ಶ್ರೀಮಾತಾ IAS, KAS ಅಕಾಡೆಮಿಯ ನೇತೃತ್ವದಲ್ಲಿ 500 ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ತರಬೇತಿಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 16ರಂದು ಬೆಳಗ್ಗೆ 10ಕ್ಕೆ ವಿಜಯಪುರದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಸಂಯೋಜಕರಾದ ಮಂಜುನಾಥ ಹಂಜಿ ಮಾಹಿತಿ ನೀಡಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಅಂದು ದಿವ್ಯ ಸಾನಿಧ್ಯವನ್ನು ಶ್ರೀ ಹೇಮ- ವೇಮ ರೆಡ್ಡಿ ಗುರುಪೀಠದ ವೇಮಾನಂದ ಸ್ವಾಮಿ ಮತ್ತು ಸಾನಿಧ್ಯವನ್ನು ತಾಳಿಕೋಟಿಯ ಶ್ರೀ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟನೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ್. ಸಿ.ಎಸ್. ನಾಡಗೌಡ, ಶಾಸಕರಾದ ಎಂಬಿ ಪಾಟೀಲ್, ಎ.ಎಸ್. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ ಆಗಮಿಸಲಿದ್ದಾರೆ.
ಅಲ್ಲದೇ, ಉಚಿತ ತರಬೇತಿಯು ಊಟ ವಸತಿ ಸಹಿತ 500 ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷ ಫ್ರಭುಗೌಡ ಎಸ್ ಬೋನಾಳ, ಉದ್ಯಮಿ ಸತೀಶ ಹುಂಡೇಕರ, ಜಿಲ್ಲಾ ರಡ್ಡಿ ಯುವ ಘಟಕದ ಅಧ್ಯಕ್ಷ ಶಿವಶರಣ ರೆಡ್ಡಿ ಇದ್ದರು.