ವಿಜಯಪುರ: ನಕಲಿ ತುಪ್ಪದ ಜಾಲವನ್ನು
ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದವರು ಭೇದಿಸಿರುವ ಘಟನೆ ವಿಜಯಪುರ ನಗರದ ಸಾಯಿ ಪಾರ್ಕ್ನಲ್ಲಿ ಶುಕ್ರವಾರ ನಡೆದಿದೆ.
ಶ್ರೀ ಬಾಲಾಜಿ ಹಾಲಿನ ಡೈರಿ ಎನ್ನುವ ಮಳಿಗೆ ಮೇಲೆ
ಅಧಿಕಾರಿಗಳ & ಸಿಬ್ಬಂದಿ ದಾಳಿ ವೇಳೆ 30 ಕೆ.ಜಿ ನಕಲಿ ತುಪ್ಪ ಪತ್ತೆ ಮಾಡಿದ್ದಾರೆ. ರವಿ ನಿಂಗನಗೌಡ ಬಿರಾದಾರ ಎನ್ನುವ ವ್ಯಕ್ತಿ ಹಾಗೂ ಇನ್ನಿತರರಿಂದ ನಕಲಿ ತುಪ್ಪ ತಯಾರಿಕೆ ಮಾಡಲಾಗುತ್ತಿತ್ತು. ನಕಲಿ ತುಪ್ಪದ ಬಾಟಲ್, ಸ್ಟಿಕರ್ ಸೇರಿದಂತೆ ಪ್ಯಾಕಿಂಗ್ ಮಟೀರಿಯಲ್ ಹಾಗೂ ಬಿಲ್ ಬುಕ್ ಹೊಂದಿದ್ದರು.
ಅಲ್ಲದೇ, ಮುದ್ದೇಬಿಹಾಳ ತಾಲ್ಲೂಕಿನ ವಿಳಾಸದ ಬಿಲ್ ಹೊಂದಿದ್ದು, ಬೆಂಗಳೂರಿನಿಂದ ಖಾಸಗಿ ಬಸ್ ಮೂಲಕ ಟಿನ್’ಗಳಲ್ಲಿ ನಕಲಿ ತುಪ್ಪ ತಯಾರಿಸಲಾಗುತ್ತಿತ್ತು. ವಶಪಡಿಸಿಕೊಂಡಿದ್ದ ನಕಲಿ ತುಪ್ಪವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.