ವಿಜಯಪುರ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ. ಇನ್ನೂ ಜಾತಿ ರಾಜಕಾರಣ ಮಾಡದೇ ಎಲ್ಲರನ್ನೂ ಒಟ್ಟಾಗಿ ಸಂಘಟನೆ ಮಾಡುವ ಕಲೆಗಳನ್ನ ಅರಿತುಕೊಂಡಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಅಧಿಕಾರ ಸಿಗಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಕೃಷ್ಣ ಕಾಡಾ ನಿರ್ದೇಶಕ ರವಿ ಖಾನಾಪುರ ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಪುತ್ರ ಬಿ. ವೈ. ವಿಜಯೇಂದ್ರ ಜನ್ಮದಿನದ ಅಂಗವಾಗಿ ವಿಜಯಪುರದ ಸಿದ್ಧೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಅಲ್ಲದೇ, ಕ್ಷೀರ ಹಂಚಿಕೆ ಮಾಡಿದರು. ವಿಜಯೇಂದ್ರ ಅವರಿಗೆ ದೇವರು ಒಳ್ಳೆಯ ಆರೋಗ್ಯ ಮತ್ತು ಹೆಚ್ಚಿನ ಸಾಮಾಜಿಕ ರಾಜಕೀಯ ಸ್ಥಾನಮಾನ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಮಾಜಿ ಕಾರ್ಪೋರೇಟ್ ಮತ್ತು ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ್ ವಂದಾಲ ಮಾತನಾಡಿ, ವಿಜಯೇಂದ್ರ ಅವರು ಈ ನಾಡಿನ ಭವಿಷ್ಯದ ನಾಯಕರು. ಅವರು ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಆಶಿಸಿದರು.
ಯುವ ಮುಖಂಡರಾದ ಶಿವಾನಂದ ಭುಯ್ಯಾರ ಸೇರಿದಂತೆ ಅಭಿಮಾನಿಗಳು, ಕಾರ್ಯಕರ್ತರು ಉಪಸ್ಛಿತರಿದ್ದರು.