ವಿಜಯಪುರ: ಮಹಾನಗರ ಪಾಲಿಕೆಯಿಂದ ಒಳಚರಂಡಿ ಪೈಪಲೈನ್ ಕಾಮಗಾರಿ ನಡೆಯುತ್ತಿರುವುದರಿಂದ ನವೆಂಬರ್ 9 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಬಡಿಕಮಾನ ಫೀಡರ್ ಮೇಲೆ ಬರುವ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ವಿಜಯಪುರ ನಗರದ ಬಾಗಾಯತ್ ಗಲ್ಲಿ, ಮುಜಾವರ್ ಗಲ್ಲಿ, ಕಮಾನ್ಖಾನ್ ಬಜಾರ, ನಾಗರಬೌಡಿ, ಗೋಲಗುಂಬಜ್ ಪೋಲಿಸ್ ಸ್ಟೇಶನ್, ಸ್ಟೇಶನ್ ರೋಡ, ಗೌಡರ ಓಣಿ, ಖತೀಬಗಲ್ಲಿ, ಗ್ಯಾರೇಜ್ ಲೈನ್, ಗ್ಯಾನಿ ಕಾಲೋನಿ,ಗಾಂಧಿ ನಗರ, ಎಸ್.ಬಿ.ಐ. ಮೇನ್ ಬ್ರ್ಯಾಂಚ್,ಎಲ್.ಐ.ಸಿ. ಕಚೇರಿ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.