ವಿಜಯಪುರ: ಯುವಕರೊಂದಿಗೆ ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ಚೆಂಡಿನ ಆಟವಾಡಿದರು.
ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಯುವಕರೊಂದಿಗೆ ಚೆಂಡು ಆಟವಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಕಾಖಂಡಕಿ ಗ್ರಾಮದಲ್ಲಿ ಪ್ರವಚನ ಕಾರ್ಯಕ್ರಮ ಹಿನ್ನಲೆ ಗುರುದೇವ ಆಶ್ರಮದಲ್ಲಿ ತಂಗಿರುವ ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ಬಿಡುವಿನ ವೇಳೆಯಲ್ಲಿ ಚೆಂಡಿನ ಆಟ ಆಡಿದ್ದಾರೆ. ಸಿದ್ಧೇಶ್ವರ ಸ್ವಾಮೀಜಿ ಯುವಕರೆಡೆಗೆ ಚೆಂಡು ಎಸೆದ ವೇಳೆ ಕ್ಯಾಚ್ ಹಿಡಿದು ಯುವಕರು ಖುಷಿಪಟ್ಟರು.