ವಿಜಯಪುರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿಗೈದಿರುವ ಘಟನೆ ವಿಜಯಪುರ ನಗರದ ರಾಮಮಂದಿರ ಸೇರಿದಂತೆ ನಾಲ್ಕು ಏರಿಯಾದ ಕಡೆಗೆ ನಡೆದಿದೆ.
ಮಹಾನಗರ ಪಾಲಿಕೆ ಆಯುಕ್ತ ಮೆಕ್ಕಳಕಿ ಹಾಗೂ ಪಾಲಿಕೆಯ ವಲಯ ಒಂದರ ಆಯುಕ್ತ ಸುನೀಲ ಪಾಟೀಲ್ ಆದೇಶದ ಮೇರೆಗೆ ಅಧಿಕಾರಿಗಳು 50 ಅಂಗಡಿಯ ಮೇಲೆ ದಾಳಿಗೈದು 10 ಅಂಗಡಿಗಳ ಸೀಜ್ ಮಾಡಿದ್ದಾರೆ. ಅಲ್ಲದೇ, 90 ಸಾವಿರ ದಂಡ ವಿಧಿಸಿದ್ದಾರೆ. ದಾಳಿ ವೇಳೆಯಲ್ಲಿ ಕಂದಾಯ ನಿರೀಕ್ಷಕ ಆಜಾದ್ ಹಂಚಿನಾಳ, ಆರೋಗ್ಯ ನಿರೀಕ್ಷಕ ವೆಂಕಟ ರಾಮುಲು, ಅಶೋಕ ಸಜ್ಜನ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.