ವಿಜಯಪುರ: ಜಿಲ್ಲೆಯಲ್ಲಿ ಇಂದು ಮತ್ತೆ ಭೂಕಂಪನವಾಗಿದೆ. ತಿಕೋಟಾ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದ ಜನರಿಗೆ ಭುವಿಯೊಡಲು ನಡುಗಿದ ಅನುಭವವಾಗಿದೆ.
ನಸುಕಿನ ಜಾವ 3 ಗಂಟೆಯಿಂದ 5 ಗಂಟೆಯವರೆಗೆ ಕಂಪನ ಉಂಟಾಗಿದ್ದು, ಆತಂಕಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಸರಣಿ ರೂಪದಲ್ಲಿ ಜಿಲ್ಲೆಯ ವಿವಿಧೆಡೆ ಇಂಥ ಘಟನೆಗಳು ಮರುಕಳಿಸುತ್ತಿವೆ.
ಇನ್ನೂ ಭೂಮಿ ಕಂಪಿಸಿರುವ ಬಗ್ಗೆ ಹಾಗೂ ಭೂಕಂಪನದ ತೀವ್ರತೆ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ನೀಡಿದ್ದು, ಯಾವುದೇ ಅಧಿಕೃತವಾಗಿ ಭೂ ಕಂಪನ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.