ವಿಜಯಪುರ: ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ ನಡೆದ 2 ದಿನ ರಾಜ್ಯ ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಬಾಲಕ ಬಾಲಕಿಯರ ಹೊನಲು ಬೆಳಕಿನ ಕುಸ್ತಿ ಪಂದ್ಯಗಳು ನಡೆದವು. ಇನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸ್ಥಳಿಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ಕುಸ್ತಿ ಪಂದ್ಯವಾಳಿ ಸ್ಥಳೀಯರಿಗೆ, ಪ್ರೇಕ್ಷಕರಿಗೆ ಮನರಂಜನೆ ಸವಿದರು.
ರಣ ರೋಚಕವಾಗಿ ನಡೆದ ಕ್ರೀಡಾಕೂಟದಲ್ಲಿ ಶೈಕ್ಷಣಿಕ 26 ಜಿಲ್ಲೆಗಳಿಂದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 950 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆಯಲ್ಲಿ ದಾವಣಗೆರೆ ಜಿಲ್ಲೆಯ ಕುಸ್ತಿ ಪಟುಗಳು ವೀರಾಗ್ರಾಣಿ ಪ್ರಶಸ್ತಿ ಗಿಟ್ಚಿಸಿಕೊಂಡರು.
ತೂಕದ ಆಧಾರದ ಮೇಲೆ ನಡೆದ ಪಂದ್ಯದ 14 ವರ್ಷದ ಒಳಗಿನ ವಿಭಾಗದ ಸ್ಪರ್ಧೆಯಲ್ಲಿ 10 ಜನ ಬಾಲಕಿಯರು, 10 ಜನ ಬಾಲಕರು ಪ್ರಥಮಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರೆ, 17 ವರ್ಷ ವಯೋಮಾನದ ಒಳಗಿನ ಕುಸ್ತಿ ಕಾಳಗದಲ್ಲಿ 10 ಬಾಲಕರು, 10 ಬಾಲಕಿಯರು ಗೆದ್ದು ಪ್ರಥಮ ಸ್ಥಾನದಲ್ಲಿ ಪ್ರಥಮ ಸ್ಥಾನ ಪಡೆದು ಜಯಶಾಲಿಯಾಗಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಸಂಭ್ರಮಿಸಿದರು. ಈ ಟೂರ್ನಿಯಲ್ಲಿ ಸ್ಥಳಿಯ 3 ಜನ ಕ್ರೀಡಾಪಟುಗಳ ಪೈಕಿ ಒರ್ವ ಕ್ರೀಡಾಪಟು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.