ವಿಜಯಪುರ: ಆಕಸ್ಮಿಕವಾಗಿ ಗುಂಡು ತಗುಲಿ ವಿಜಯಪುರ ಜಿಲ್ಲೆಯ ಯೋಧ ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಶ್ಮೀರನ ಶ್ರೀನಗರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದ ಸಿಎಸ್ ಐಎಸ್ಎಫ್ ಯೋಧ ದಯಾನಂದ ಪಾಟೀಲ (26) ಅಸುನೀಗಿದ್ದಾರೆ. ಸಧ್ಯ ಮಿಸ್ ಫೈಯರ್ ಆಗಿ ಸಾವು ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಕಳೆದ ಐದಾರು ವರ್ಷದ ಹಿಂದೆ ಸೇನೆಗೆ ದಯಾನಂದ ಸೇರಿದ್ದರು. ಇನ್ನು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಸೇವೆಯಲ್ಲಿರುವಾಗಿ ಈ ಅವಘಡ ಸಂಭವಿಸಿದೆ.