ವಿಜಯಪುರ: ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವುಸಪ್ತಾಹ ಕಾರ್ಯಕ್ರಮದ ನಿಮಿತ್ತ ನಗರದ ಆಕಾಶವಾಣಿ ಕೇಂದ್ರದಲ್ಲಿ ವಿಶೇಷ ನೇರ ಪೋನ್ ಕಾರ್ಯಕ್ರಮ ಜರುಗಿತು.
ವಿಜಯಪುರ ಜಿಲ್ಲಾ ಲೋಕಾಯುಕ್ತ ಅಧೀಕ್ಷಕಿ ಅನಿತಾ ಹದ್ದನ್ನವರ ಹಾಗೂ ಡಿವೈಎಸ್ಪಿ ಅರುಣ ನಾಯಕ ಅವರು ಭಾಗವಹಿಸಿ, ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಂದರ್ಭ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಬಿ.ವ್ಹಿ. ಶ್ರೀಧರ, ಡಾ.ಸೋಮಶೇಖರ ರುಳಿ, ತಾಂತ್ರಿಕ ವಿಭಾಗದ ಹಿರಿಯ ಸಹಾಯಕ ಅಭಿಯಂತರ ಕಬೀರ ಲಮಾಣಿ, ಐ.ಟಿ.ಬನವಿ, ಜಿ.ಎನ್.ಕರಾಂಡೆ, ರಮೇಶ ಮಗದುಮ, ಎ.ಬಿ.ರಾಜಕುಮಾರ, ಎಸ್.ಎ. ಚಿಂತಾಮಣಿ, ಆನಂದ ಠಕ್ಕಣ್ಣವರ, ಆನಂದ ಡೋಣಿ, ನೇತಾಜಿ ಗಾಂಧಿ, ಭಾರತಿ ಸುಣಗಾರ, ಅನಂತ ಪಾಟೀಲ, ಆರ್.ಎಸ್. ಚಾಂದಕವಠೆ, ವಿಜಯ ಕೊಲ್ಹಾರ, ಎಂ.ಕೆ. ಶಿವಕುಮಾರ ಇದ್ದರು.