ಬೆಂಗಳೂರು: ಐಶು ಹೊಸ ಲುಕ್ ನೋಡಿ, ಫ್ಯಾನ್ಸ್ ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್ ಆಗಿ ಅಂತಿದ್ದಾರೆ.
ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕಿಯಾಗಿ ಸಿನಿಪ್ರೇಕ್ಷಕರ ಗಮನ ಸೆಳೆದ ನಟಿ ಅಮೂಲ್ಯ, ನಂತರ ಕನ್ನಡ ಸಾಕಷ್ಟು ಸಿನಿಮಾಗಳಿಗೆ ಸೂಪರ್ ಸ್ಟಾರ್ಗಳ ಜತೆ ತೆರೆ ಹಂಚಿಕೊಂಡರು.
ಬಳಿಕ ಗುರು ಹಿರಿಯರ ಸಮ್ಮುಖದಲ್ಲಿ ಜಗದೀಶ್ ಚಂದ್ರ ಜತೆ ಹಸೆಮಣೆ ಏರಿದ್ದರು. ಈಗ ಅವಳಿ ಮಕ್ಕಳ ತಾಯಿಯಾಗಿ ಅವರ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೇ, ಅಮೂಲ್ಯಯವರ ಹೊಸ ಲುಕ್ ನೋಡಿ ಅಭಿಮಾನಿಗಳು ಫುಲ್ ಫೀದಾ ಆಗಿದ್ದಾರೆ.